ಹುಬ್ಬಳ್ಳಿ : ಫೇಸ್‌ಬುಕ್ ಖಾತೆಯನ್ನು ಅನ್ ಬ್ಲಾಕ್ ಮಾಡಿಕೊಡುವುದಾಗಿ ನಂಬಿಸಿ ಯುವತಿಗೆ 5.65 ಲಕ್ಷ ರೂಪಾಯಿ ವಂಚಿಸಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಪ್ರೀತಿ ಎಂಬ ಯುವತಿ ವಂಚನೆಗೆ ಒಳಗಾದವರು.
ಬ್ಲಾಕ್ ಆಗಿರುವ ಫೇಸ್‌ಬುಕ್ ಖಾತೆಯನ್ನು ಅನ್ ಬ್ಲಾಕ್ ಮಾಡಿಸುವ ಸಲುವಾಗಿ ಗೂಗಲ್‌ನಲ್ಲಿ ಫೇಸ್ ಬುಕ್ ಕಸ್ಟಮರ್ ಕೇರ್ ನಂಬರನ್ನು ಪ್ರೀತಿ ಸಂಪರ್ಕಿಸಿದ್ದಾರೆ. ಅಪರಿಚಿತರು ಸಹಾಯ ಮಾಡುವ ನೆಪದಲ್ಲಿ ಮೊಬೈಲ್‌ಗೆ ಎಡೆಸ್ ಆ್ಯಪ್ ಡೌನ್ ಲೋಡ್ ಮಾಡಿಸಿ ಅದರ ಸಹಾಯದಿಂದ ಹಂತ ಹಂತವಾಗಿ ಒಟ್ಟು 5.65 ಲಕ್ಷ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಕೋರಿಯರ್ ತಲುಪಿಸುವುದಾಗಿ ನಂಬಿಸಿ ವಂಚನೆ: ಇದೇ ರೀತಿಯ ಮತ್ತೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ವಂಚನೆಗೊಳಗಾದ ಯುವತಿ ಡಾ.ಜಾನಕಿ. ಈಕೆಗೆ ಅಪರಿಚಿತರು ಕೋರಿಯರ್ ತಲುಪಿಸುವುದಾಗಿ ಹೇಳಿ ಮೊಬೈಲ್‌ಗೆ ಲಿಂಕ್ ಕಳುಹಿಸಿ 99,975 ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸದ್ಯ ಈ ಎರಡು ಪ್ರಕರಣಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂಓದಿ: ಕಸ್ಟಮ್ಸ್ ಅಧಿಕಾರಿಗಳೆಂದು ಹಣ ಪಡೆದು ವಂಚಿಸುತ್ತಿದ್ದ ದಂಪತಿಯ ಬಂಧನ