ಪೋರಬಂದರ್(ಗುಜರಾತ್): ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿರುವ ಹಿರಿಯ ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿನಿಯರನ್ನು ಸಲಿಂಗ ಕಾಮಕ್ಕೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಕಾಲೇಜಿನ ಪ್ರಾಂಶುಪಾಲರು ಸಲಿಂಗ ಕಾಮದ ಆರೋಪ ಸುಳ್ಳು ಎಂದು ಹೇಳಿದ್ದು, ಆರ್ಯ ಕನ್ಯಾ ಗುರುಕುಲ ಸಂಸ್ಥೆಗೆ ಕೆಟ್ಟ ಹೆಸರು ತರಲು ಇಂಥ ಸುಳ್ಳು ಹೇಳಿಕೆ ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಪೋರಬಂದರ್‌ನ ಗುರುಕುಲ ಬಾಲಕಿಯರ ಹಾಸ್ಟೆಲ್‌ನಿಂದ ಸಲಿಂಗ ಕಾಮದ ಗಂಭೀರ ಆರೋಪದ ಬಳಿಕ ಪೋಷಕರು ದಿಗ್ಬ್ರಮೆಗೊಂಡಿದ್ದಾರೆ.
ವಿದ್ಯಾರ್ಥಿನಿಯಿಂದ ಪೋಷಕರಿಗೆ ಪತ್ರ: ವಿದ್ಯಾರ್ಥಿನಿಯೊಬ್ಬರಿಗೆ ಇತರ ವಿದ್ಯಾರ್ಥಿನಿಯರು ಸಲಿಂಗಕಾಮಿ ಸಂಬಂಧ ಹೊಂದುವಂತೆ ಒತ್ತಾಯಿಸಿರುವ ಮತ್ತು ಅದನ್ನು ಪಾಲಿಸದಿದ್ದರೆ, ಅವಳು ಆತ್ಮಹತ್ಯೆ ಮಾಡಿಕೊಳ್ಳುವಳು ಎಂದು ಪತ್ರ ಬರೆದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಹೆದರಿದ ವಿದ್ಯಾರ್ಥಿನಿಯೊಬ್ಬಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ದಿಢೀರ್ ಪೋಷಕರು ಹಾಸ್ಟೇಲ್ಗೆ ತೆರಳಿ ಹಾಸ್ಟೇಲ್ ಮುಖ್ಯ ವ್ಯವಸ್ಥಾಪಕರ ಜತೆಗೆ ಮಾತನಾಡಿದ್ದಾರೆ. ಪೋಷಕರು ಆರೋಪಿಸಿದರೂ, ಹಾಸ್ಟೆಲ್ ವ್ಯವಸ್ಥಾಪಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಮ್ಮ ಹಾಸ್ಟೇಲ್ದಲ್ಲಿ ಅಂಥ ಘಟನೆ ಸಂಭವಿಸದಿರುವ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ಸಲಿಂಗಕಾಮ ಸಂಬಂಧ ಹೊಂದಲೂ ವಿದ್ಯಾರ್ಥಿನಿಯರು ಪತ್ರಗಳನ್ನು ಬರೆಯುತ್ತಿರುವುದನ್ನೂ ವಿದ್ಯಾರ್ಥಿನಿಯರು ಬಹಿರಂಗಗೊಳಿಸಿದ್ದಾರೆ. ಸಾರ್ವಜನಿಕವಾಗಿ ಈ ಪತ್ರದಲ್ಲಿ ಬರೆದಿರುವ ಅಶ್ಲೀಲ ಪಠ್ಯವನ್ನು ಓದಿದ ವಿದ್ಯಾರ್ಥಿನಿಯರು ಹಾಗೂ ಪೋಷಕರು ಗುರುಕುಲಕ್ಕೆ ತೆರಳಿ ಅದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಈ ಆರೋಪ ಸುಳ್ಳು ಎಂದು ಸಂಸ್ಥೆಯ ಪ್ರಧಾನ ಅಧಿಕಾರಿಗಳು ತಿಳಿಸಿದ್ದರೆ, ಇದಕ್ಕೆ ಗುರುಕುಲದ ಇಬ್ಬರು ಕುಲಪತಿಗಳೂ ಬೆಂಬಲ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನು ಓದಿ:ವರದಕ್ಷಿಣೆ ಕಿರುಕುಳ: ಹಸುಳೆಯೊಂದಿಗೆ ಬಸ್ ನಿಲ್ದಾಣದಲ್ಲಿ ಮಹಿಳೆಯ ಪರದಾಟ
ಹಾಸ್ಟೆಲ್‌ನಲ್ಲಿ 300 ವಿದ್ಯಾರ್ಥಿನಿಯರು: ಆರ್ಯ ಕನ್ಯಾ ಗುರುಕುಲ ಕಾಲೇಜಿನ ಹಾಸ್ಟೆಲ್‌ನಲ್ಲಿ 300 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇಲ್ಲಿ ಓದುತ್ತಿರುವ ಕೆಲವು ವಿದ್ಯಾರ್ಥಿನಿಯರು ಸಲಿಂಗಕಾಮಿ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾರೆ ಎಂದು 13 ವರ್ಷದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಈ ಅಪ್ರಾಪ್ತೆಯನ್ನು ಪೋಷಕರು ಹಾಸ್ಟೆಲ್‌ನಿಂದ ಕರೆದೊಯ್ಯಲು ನಿರ್ಧರಿಸಿದ್ದಾರೆ. ಸಂಸ್ಥೆಯ ಹಾಸ್ಟೇಲ್ನಲ್ಲಿರುವ ಹೆಚ್ಚಿನ ವಿದ್ಯಾರ್ಥಿನಿಯರ ಬಗ್ಗೆ ಅಪ್ರಾಪ್ತೆ ಗಂಭೀರ ಆರೋಪ ಮಾಡಿದ್ದಾಳೆ.
ಇಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಸಹ ಸಲಿಂಗ ಕಾಮ ಸಂಬಂಧ ಹೊಂದಲು ಒತ್ತಡ ತರಲಾಗುತ್ತಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಗೃಹಿಣಿಯರೆಲ್ಲರೂ ಭಾಗಿಯಾಗಿದ್ದಾರೆ. ವಿದ್ಯಾರ್ಥಿನಿಯರನ್ನು ಈ ಹಗರಣದಲ್ಲಿ ಸಿಲುಕಿಸಲು ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಪೊಲೀಸ್ ತನಿಖೆಗೆ ಆಗ್ರಹ: ನಗರದಲ್ಲಿ ಈ ವಿಷಯ ಕುರಿತಾಗಿ ಗಂಭೀರ ಚರ್ಚೆಯಾಗಿದ್ದು, ಈ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಹಿರಿಯ ವಿದ್ಯಾರ್ಥಿನಿಯರು ಸಲಿಂಗ ಕಾಮಕ್ಕಾಗಿ ಪ್ರೇರೇಪಿಸುತ್ತಿರುವ ಬಗ್ಗೆ ಕಿರಿಯ ವಿದ್ಯಾರ್ಥಿನಿಯರ, ಪೋಷಕರ ಹೇಳಿಕೆ ಪಡೆದು ಪೊಲೀಸರು ಹೆಚ್ಚಿನ ತನಿಖೆ ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂಓದಿ:ಮಂಡ್ಯ: ಉಪವಿಭಾಗಾಧಿಕಾರಿಗೆ ಗ್ರಾಮಸ್ಥರಿಂದ ಸೀಮಂತ ಶಾಸ್ತ್ರ