ಮಹಾರಾಜ್ಗಂಜ್(ಉತ್ತರ ಪ್ರದೇಶ): ದೇಶದಲ್ಲಿ ಇಂಧನ ದರ ಗಗನಕ್ಕೇರುತ್ತಿದ್ದು, ನೆರೆಯ ರಾಷ್ಟ್ರವಾದ ನೇಪಾಳದಿಂದ ಪೆಟ್ರೋಲ್ ಅನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ.
ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಭಾರತಕ್ಕಿಂತ 22 ರೂ. ಕಡಿಮೆ ಇದೆ. ಹೀಗಾಗಿ ಭಾರತ - ನೇಪಾಳ ಗಡಿಭಾಗವಾದ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಅತಿ ಕಡಿಮೆ ಬೆಲೆಗೆ ನೇಪಾಳದಿಂದ ಪೆಟ್ರೋಲ್ ಖರೀದಿಸಿ, ಅತಿಹೆಚ್ಚು ಬೆಲೆಗೆ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಹಾರಾಜ್ಗಂಜ್ನಲ್ಲಿ ಮಾತ್ರವಲ್ಲದೇ ಬಿಹಾರದ ಅರೇರಿಯಾ ಹಾಗೂ ಕಿಶನ್ಗಂಜ್ ಪ್ರದೇಶದಲ್ಲೂ ಕಿರಿದಾದ ಮಾರ್ಗಗಳ ಮೂಲಕ ಬೈಕ್ಗಳಲ್ಲಿ ಪೆಟ್ರೋಲ್ ಕಳ್ಳಸಾಗಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಭಾರತಕ್ಕೆ ಟ್ಯಾಂಕರ್‌ನಲ್ಲಿ ಡೀಸೆಲ್ ಸಾಗಿಸುತ್ತಿದ್ದ ಮೂವರನ್ನು ನೇಪಾಳ ಪೊಲೀಸರು ಸೋಮವಾರ ಬಂಧಿಸಿದ್ದರು. ಈ ಬಳಿಕ ಭಾರತ-ನೇಪಾಳ ಗಡಿಭಾಗಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.