ETV Bharat / crime

62 ವರ್ಷದ ವೃದ್ಧೆ ಮೇಲೆ ಅತ್ಯಾಚಾರ: ಚಾಕುವಿನಿಂದ ಹಲ್ಲೆ

author img

By

Published : Mar 25, 2021, 11:38 AM IST

ವೃದ್ಧೆ ಮೇಲೆ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ ಆರೋಪಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.

A 62 year old woman was raped in forest in Gwalior
62 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿ, ಚಾಕುವಿನಿಂದ ಹಲ್ಲೆ

ಗ್ವಾಲಿಯರ್​ (ಮಧ್ಯಪ್ರದೇಶ): 62 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನ ಭಗವಾನ್‌ಪುರ ಗ್ರಾಮದಲ್ಲಿ ನಡೆದಿದೆ.

ಕೆಲಸದ ನೆಪದಲ್ಲಿ ವೃದ್ಧೆಯನ್ನು ನಿನ್ನೆ ಬೆಟ್ಟದ ಮೇಲೆ ಆರೋಪಿ ಕರೆದೊಯ್ದಿದ್ದು, ಇಂದು ಬೆಳಗ್ಗೆಯ ವರೆಗೂ ಅವರಿಗೆ ಹಿಂಸೆ ನೀಡಿ ಪರಾರಿಯಾಗಿದ್ದಾನೆ. ಅರೆಬೆತ್ತಲೆ ಸ್ಥಿತಿಯಲ್ಲಿ ಗಾಯಗೊಂಡು ಬಿದ್ದಿದ್ದ ವೃದ್ಧೆಯನ್ನು ನೋಡಿದ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ವಿವಿಯಲ್ಲಿ ಕಂಪ್ಯೂಟರ್​ ನೌಕರರಿಂದ ಅಶ್ಲೀಲ ವಿಡಿಯೋ ವೀಕ್ಷಣೆ: ದುರ್ನಡತೆ ಜಗಜ್ಜಾಹೀರು!

ಗ್ರಾಮಸ್ಥರ ಮಾಹಿತಿ ಮೇರೆಗೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯ ಹೇಳಿಕೆ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆರೋಪಿಯು ಒಬ್ಬ ಮಿಠಾಯಿವಾಲಾ ಎಂದು ತಿಳಿದು ಬಂದಿದ್ದು, ಆತನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.