ಗೋಘಾಟ್, ಪಶ್ಚಿಮ ಬಂಗಾಳ : ನಂದಿಗ್ರಾಮದಲ್ಲಿ ತಮ್ಮ ಕಾರಿನ ಮೇಲೆ ದಾಳಿ ಮಾಡಿ, ತಮ್ಮ ಮೇಲೆ ಹಲ್ಲೆ ನಡೆಸಿದವರ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತಾವು ಹೊಂದಿದ್ದು, ಚುನಾವಣೆ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
ಗೋಘಾಟ್ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಸದ್ಯಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಕಾರಿನ ಮೇಲೆಯೇ ದಾಳಿ ಮಾಡಲು ಅವರಿಗೆಷ್ಟು ಧೈರ್ಯ. ಚುನಾವಣೆಗಳು ನಡೆಯುತ್ತಿರುವುದರಿಂದ ಮಾತ್ರ ನಾನು ಸುಮ್ಮನಿದ್ದೇನೆ. ಇಲ್ಲದಿದ್ದರೆ ಅವರು ಎಷ್ಟು ದೊಡ್ಡವರೆಂದು ನಾನು ನೋಡುತ್ತಿದ್ದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಲೇಡಿ ಸಿಂಗಂ' ದೀಪಾಲಿ ಆತ್ಮಹತ್ಯೆ: 'ನನ್ನ ಹುಲಿ' ಇಲ್ಲದ ಅರಣ್ಯ ಸಂರಕ್ಷಿಸಿ ಪ್ರಯೋಜನವೇನು?-ತಾಯಿಯ ಕಣ್ಣೀರು
ದಾಳಿಕೋರರ ಬಗ್ಗೆ ಮಾತನಾಡಿದ ಅವರು ಯಾವ ಗದ್ದರ್ (ದೇಶದ್ರೋಹಿ) ನಿಮಗೆ ಆಶ್ರಯ ನೀಡುತ್ತಾನೆ ಎಂಬುದನ್ನು ನೋಡುತ್ತೇನೆ. ನೀವು ದೆಹಲಿ, ಬಿಹಾರ, ರಾಜಸ್ಥಾನ ಅಥವಾ ಉತ್ತರ ಪ್ರದೇಶಕ್ಕೆ ಹೋದರೂ ನಾನು ಪಶ್ಚಿಮ ಬಂಗಾಳಕ್ಕೆ ನಿಮ್ಮನ್ನ ಕರೆತರುತ್ತೇನೆ ಎಂದಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಹಲ್ಲೆಗೆ ಒಳಗಾಗಿ, ಚಿಕಿತ್ಸೆ ಪಡೆದಿದ್ದು, ಈಗಲೂ ಕೂಡಾ ವ್ಹೀಲ್ ಚೇರ್ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.