ದೋಡಾ (ಜಮ್ಮು- ಕಾಶ್ಮೀರ): ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಜಮ್ಮು ಮತ್ತು ಕಾಶ್ಮೀರದ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಜೋಧ್‌ಪುರ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಹಾಗೂ ಭದರ್ವಾ ಕೇಂದ್ರಿಯ ವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ರಾಜೀವ್ ಮಹಾಜನ್ ಬಂಧಿತ ಆರೋಪಿ.
ಇದನ್ನೂ ಓದಿ: ದುಬಾರಿ ಹಣಕ್ಕೆ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; 10 ಆರೋಪಿಗಳ ಬಂಧನ
ಪೋಷಕರೊಬ್ಬರು ರಾಜೀವ್ ಮಹಾಜನ್ ಬಳಿ ತಮ್ಮ ಮಗಳನ್ನು ಕಿಶ್ತ್ವರ್ ಕೇಂದ್ರಿಯ ವಿದ್ಯಾಲಯದಿಂದ ಭದರ್ವಾ ವಿದ್ಯಾಲಯಕ್ಕೆ ಕಳುಹಿಸಲು ವರ್ಗಾವಣೆ ಪ್ರಮಾಣಪತ್ರ ನೀಡುವಂತೆ ಕೋರಿದ್ದರು. ಇದಕ್ಕೆ ಮಹಾಜನ್, 25 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ. ಕೊನೆಯದಾಗಿ 15 ಸಾವಿರ ರೂ.ಗೆ ಒಪ್ಪಿಕೊಂಡಿದ್ದರು ಎಂದು ಪೋಷಕರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೋಡಾದ ಪೋಸ್ಟ್ ಆಫೀಸ್ ಬಳಿ ಲಂಚ ಸ್ವೀಕರಿಸುವ ವೇಳೆ ರಾಜೀವ್ ಮಹಾಜನ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.