ETV Bharat / crime

ಮದುವೆಯಾದ ಏಳೇ ತಿಂಗಳಿಗೆ ಶವವಾದ ನವವಿವಾಹಿತೆ: ಗಂಡನ ಅಕ್ರಮ ಸಂಬಂಧವೇ ಕಾರಣವಾಯಿತಾ? - ನವವಿವಾಹಿತೆ ನೇಣಿಗೆ ಶರಣು

ನವವಿವಾಹಿತೆ ನೇಣಿಗೆ ಶರಣು: ಮದುವೆಯಾದ ಮೂರು ತಿಂಗಳ ನಂತರ ಯಮುನಾಳ ಗಂಡ ವಿಶ್ವೇಶ್ವರನಿಗೆ ಮತ್ತು ಅವನ ತಮ್ಮನ ಹೆಂಡತಿಗೆ ಅಕ್ರಮ ಸಂಬಂಧ ಇರುವುದಾಗಿ ಯಮುನಾಳಿಗೆ ತಿಳಿದಿದೆ.

ಮದುವೆಯಾದ ಏಳೇ ತಿಂಗಳಿಗೆ ಶವವಾದ ನವವಿವಾಹಿತೆ; ಗಂಡನ ಅಕ್ರಮ ಸಂಬಂಧವೇ ಕಾರಣವಾಯಿತಾ?
karwar-women-commit-suicide-due-to-illegal-relationship-her-husband
author img

By

Published : Dec 6, 2022, 11:33 AM IST

ಕಾರವಾರ: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತ ನವವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಅಂಕೋಲಾ ತಾಲೂಕಿನ ಬೆಳಸೆ ಹಂದಿಗದ್ದೆಯಲ್ಲಿ ನಡೆದಿದೆ. ಯಮುನಾ ಗೌಡ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

7 ತಿಂಗಳ ಹಿಂದೆ ಬೆಳಸೆ ಹಂದಿಗದ್ದೆಯ ವಿಶ್ವೇಶ್ವರ ಗೌಡನಿಗೆ ಯಮುನಾಳನ್ನು ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಮೂರು ತಿಂಗಳ ನಂತರ ಯಮುನಾಳ ಗಂಡ ವಿಶ್ವೇಶ್ವರನಿಗೆ ಮತ್ತು ಅವನ ತಮ್ಮನ ಹೆಂಡತಿಗೆ ಅಕ್ರಮ ಸಂಬಂಧ ಇರುವುದಾಗಿ ಯಮುನಾಳಿಗೆ ತಿಳಿದಿದೆ. ಈ ಕುರಿತು ಮನೆಯಲ್ಲಿ ಕೇಳಿದ್ದಕ್ಕೆ ಯಮುನಾಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದರು.

ಅಲ್ಲದೇ ಮನೆಯಿಂದ ಹೊರಹೋಗುವಂತೆ ಬೆದರಿಸಿದ್ದರು. ಇದರಿಂದ ಮನನೊಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಅಣ್ಣ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್​ ಉದಯ ಕುಂಬಾರ, ಪಿಎಸ್‌ಐ ಪ್ರವೀಣ ಕುಮಾರ, ಪ್ರೊಬೇಶನರಿ ಪಿಎಸ್‌ಐ ಸುನೀಲ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದ ವೈದ್ಯೆಯ ಸಾವಿಗೆ ಬಿಗ್​ ಟ್ವಿಸ್ಟ್​.. ಪೋಸ್ಟ್​ ಮಾರ್ಟಮ್​ ರಿಪೋರ್ಟ್​ನಲ್ಲಿ ಸ್ಫೋಟಕ ಮಾಹಿತಿ ಬಯಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.