ಚಮೋಲಿ(ಉತ್ತರಾಖಂಡ್): ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಮೋಲಿ ಜಿಲ್ಲೆಯ ಘುನಿ ಎಂಬ ಗ್ರಾಮದಲ್ಲಿ ನಡೆದಿದೆ. ಪತಿ ದಿನೇಶ್ ಲಾಲ್ (38), ಪತ್ನಿ ಬಿರಾ ದೇವಿ (35), ಪುತ್ರಿ ನೇಹಾ (13), ಪುತ್ರ ಅರುಣ್ (8) ಹಾಗೂ ಮತ್ತೊರ್ವ ಪುತ್ರ ಅಕ್ಷಯ್ (7) ಮೃತ ದುರ್ದೈವಿಗಳು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಚಮೋಲಿ ಜಿಲ್ಲಾಧಿಕಾರಿ, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ದಿನೇಶ್ ಲಾಲ್ ಅವರ ಮೃತ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಉಳಿದ ನಾಲ್ವರ ಮೃತದೇಹಗಳು ಮನೆಯೊಳಗೆ ಪತ್ತೆಯಾಗಿವೆ ಎಂದು ಘುನಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ರಾವತ್ ತಿಳಿಸಿದ್ದಾರೆ.
ವೈದ್ಯರನ್ನು ಸ್ಥಳಕ್ಕೆ ಕರೆಸಿ ಗ್ರಾಮದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಐವರ ಸಾವಿನ ಕಾರಣ ತಿಳಿಯಬೇಕಿದೆ.
ಇದನ್ನೂ ಓದಿ: ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ಜಾನುವಾರು ಕಳ್ಳಸಾಗಣೆದಾರರ ಮೇಲೆ ಬಿಎಸ್‌ಎಫ್ ದಾಳಿ: ಓರ್ವ ಹತ