ETV Bharat / crime

ವಿಜಯಪುರ: ಶೀಲ ಶಂಕಿಸಿ ಪತ್ನಿ ಕೊಂದು ನೇಣಿಗೆ ಶರಣಾದ ಪತಿ - ಶೀಲ ಶಂಕಿಸಿ ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

Husband commits suicide after wife murder: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿ ಪತಿ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

husband suicide after wife murder in vijayapura district
ವಿಜಯಪುರ: ಶೀಲ ಶಂಕಿಸಿ ಪತ್ನಿ ಕೊಂದು ನೇಣಿಗೆ ಶರಣಾದ ಪತಿ
author img

By

Published : Dec 16, 2021, 1:51 PM IST

ವಿಜಯಪುರ: ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ ನಂತರ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿಡಗುಂದಿ ತಾಲೂಕಿನ ಬೇನಾಳ ಆರ್.ಎಸ್.ಗ್ರಾಮದಲ್ಲಿ ನಡೆದಿದೆ.

ಹನುಮವ್ವ ಶಿವಪ್ಪ ಮನಗೂಳಿ (38) ಕೊಲೆಯಾದ ಮಹಿಳೆ. ಶಿವಪ್ಪ ಮನಗೂಳಿ(45) ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಬೇನಾಳ ಆರ್.ಎಸ್. ಗ್ರಾಮದ ಹೊರಭಾಗದ ಜಮೀನಿನ ಶೆಡ್ ಗೆ ನಿನ್ನೆ ಪತ್ನಿ ಹನುಮವ್ವಳನ್ನು ಕರೆದುಕೊಂಡು ಹೋದ ಶಿವಪ್ಪ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅಲ್ಲಿಯೇ ಇದ್ದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೈತ ಶಿವಪ್ಪ ಮನಗೂಳಿ ಹಾಗೂ ಹನುಮವ್ವ ದಂಪತಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳಿದ್ದಾಳೆ. ಶಿವಪ್ಪ ಕುಡಿತದ ಚಟಕ್ಕೆ ಅಂಟಿಕೊಂಡು ಪತ್ನಿ ಶೀಲದ ಮೇಲೆ ಯಾವಾಗಲೂ ಸಂಶಯಗೊಳ್ಳುತ್ತಿದ್ದನು. ಈ ಬಗ್ಗೆ ಆತನ ಪುತ್ರರಾದ ರಮೇಶ್​ ಮತ್ತು ರವಿ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದರೂ ತಿಳಿದುಕೊಂಡಿರಲಿಲ್ಲ. ತಮ್ಮ ಹೊಲದಲ್ಲಿ ಪತ್ನಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಪುತ್ರ ರಮೇಶ್​ ಮನಗೂಳಿ ನೀಡಿದ ದೂರಿನಂತೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿ ಅರೆಸ್ಟ್​​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.