ETV Bharat / crime

ಪೆಟ್ರೋಲ್​ ಸುರಿದು ಹೆಂಡ್ತಿ, ಮಗಳಿಗೆ ಬೆಂಕಿ ಹಚ್ಚಿದ ಗಂಡ: ಪತ್ನಿ ಸಾವು, ಮಗಳು ಗಂಭೀರ! - ಪೆಟ್ರೋಲ್​ ಸುರಿದು ಬೆಂಕಿ

ಹೆಂಡತಿ- ಮಗಳೊಂದಿಗೆ ಜಗಳ ಮಾಡಿಕೊಂಡಿರುವ ಗಂಡ ಅವರ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

husband burnt wife alive
husband burnt wife alive
author img

By

Published : Jul 5, 2021, 10:34 PM IST

ಪತೇಹಪುರ(ಉತ್ತರ ಪ್ರದೇಶ): ಕೌಟುಂಬಿಕ ಕಲಹದ ವಿಚಾರವಾಗಿ ಪಾಪಿ ಗಂಡನೋರ್ವ ಹೆಂಡತಿ ಹಾಗೂ ವಿವಾಹಿತ ಮಗಳ ಮೇಲೆ ಪೆಟ್ರೋಲ್​ ಸುರಿದಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಪತೇಹಪುರದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದು, ಮಗಳನ್ನು ಹೆಚ್ಚಿನ ಚಿಕಿತ್ಸೆಗೋಸ್ಕರ ಕಾನ್ಪುರ್​ಕ್ಕೆ ರವಾನೆ ಮಾಡಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯನ್ನ ಈಗಾಗಲೇ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ ಕಾರಣಕ್ಕೆ ಘಟನೆ?

65 ವರ್ಷದ ಫೂಲ್ಚಂದ್ ಬಟ್ಟೆ ವ್ಯಾಪಾರ ನಡೆಸುತ್ತಿದ್ದನು. ಈತನ ತಂದೆ ಸಾವನ್ನಪ್ಪುವುದಕ್ಕೂ ಮೊದಲೇ ಮನೆಯನ್ನು ಪೂಲ್ಚಂದ್​​ ಹೆಂಡತಿ ಸುಶೀಲಾ ಹೆಸರಿಗೆ ಬರೆದಿದ್ದ. ಇದೇ ವಿಚಾರವಾಗಿ ಹೆಂಡತಿ ಜೊತೆಗೆ ಪೂಲ್ಚಂದ್​ ಜಗಳವಾಡುತ್ತಿದ್ದ. ಇದರ ಬೆನ್ನಲ್ಲೇ ಇವರ ಕಿರಿಯ ಮಗಳು ರಜನಿ ವಿವಾಹ ನಿಶ್ಚಯವಾಗಿದೆ. ಆದರೆ ಇದು ಪೂಲ್ಚಂದ್​ಗೆ ಇಷ್ಟವಿರಲಿಲ್ಲ.

ನಿನ್ನೆ ಸಂಜೆ ಕೂಡ ಇದೇ ವಿಚಾರವಾಗಿ ಪೂಲ್ಚಂದ್​ ಮನೆಗೆ ಬಂದ ದೊಡ್ಡ ಮಗಳು ಹಾಗೂ ಹೆಂಡತಿ ಜತೆ ಜಗಳವಾಡಿದ್ದಾನೆ. ಈ ವೇಳೆ ಆಕ್ರೋಶದಲ್ಲಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಆಸ್ಪತ್ರೆಗೆ ದಾಖಲು ಮಾಡುವ ಸಂದರ್ಭದಲ್ಲೇ ಪತ್ನಿ ಸಾವನ್ನಪ್ಪಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.