ವಂಕಿಡಿ(ಹೈದರಾಬಾದ್): ಕೊಮರಂ ಭೀಮ್ ಜಿಲ್ಲೆಯ ವಂಕಿಡಿ ಮಂಡಲದ ಚೌಪನಗುಡ ಗ್ರಾಪಂ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿಯಾಗಿದ್ದಾನೆ. ದಾಳಿಯಲ್ಲಿ ರೈತ ಸಿಡಂ ಭೀಮು ಎಂಬುವರು ಮೃತಪಟ್ಟಿದ್ದಾರೆ.
ಘಟನೆ ವಿವರ : ರೈತ ತನ್ನ ಹೊಲದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಕಾಯಲು ಹೊಲಕ್ಕೆ ಹೋಗಿದ್ದನು. ಈ ವೇಳೆ ಆತನ ಮೇಲೆ ಹುಲಿ ಎರಗಿ ಹತ್ಯೆ ಮಾಡಿದೆ. ರೈತನು ಹತ್ತಿ ಬೆಳೆ ಜಮೀನಿನಿಂದ ಹುಲಿ ಸ್ವಲ್ಪ ದೂರ ಎಳೆದೊಯ್ದಿದೆ. ದಾಳಿ ಅರಿತ ಅಕ್ಕಪಕ್ಕದ ದನಗಾಹಿಗಳು ಜೋರಾಗಿ ಕಿರುಚಾಡಿದ್ದಾರೆ. ಈ ಧ್ವನಿಗೆ ಹೆದರಿದ ಹುಲಿಯು ಸ್ಥಳದಿಂದ ರೈತನನ್ನು ಬಿಟ್ಟು ಹೋಗಿದೆ.
ಆದರೆ ಅಲ್ಲಿಗೆ ಗೋರಕ್ಷಕರು ತಲುಪುವಷ್ಟರಲ್ಲಿ ತೀವ್ರ ಗಾಯಗೊಂಡಿದ್ದ ರೈತ ಸಾವಿಗೀಡಾಗಿದ್ದಾನೆ. ಮೃತ ರೈತನು ಪತ್ನಿ, ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ರೈತ ಬಂಜರು ಭೂಮಿಯಲ್ಲಿ ಸಾಗುವಳಿ ಮಾಡಿ ತನ್ನ ಕುಟುಂಬವನ್ನು ಸಲಹುತ್ತಿದ್ದರು. ಆದರೆ, ಈತನ ಸಾವಿನಿಂದ ಕುಟುಂಬದ ಸ್ಥಿತಿ ಶೋಚನೀಯವಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಮಹಾರಾಷ್ಟ್ರದ ಹುಲಿ ರೈತನ ಮೇಲೆ ದಾಳಿ ಮಾಡಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪಕ್ಷಿಗಳ ರಕ್ಷಣೆಗೆ ನಿರ್ಮಾಣವಾಯ್ತು ಶಿವನ ಮೂರನೇ ಕಣ್ಣಿನ ಆಕಾರದ ದ್ವೀಪ