ಚೆನ್ನೈ(ತಮಿಳುನಾಡು): ಕಾಂಚೀಪುರಂನ ಮನೆಯೊಂದರ ಮೇಲೆ ದಾಳಿ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು 400 ವರ್ಷಗಳ ಹಳೆಯದಾದ ನೃತ್ಯದ ಭಂಗಿಯಲ್ಲಿರುವ ಗಣೇಶ ಪ್ರತಿಮೆಯನ್ನು ವಶಕ್ಕೆ ಪಡೆದರು.
ಪ್ರತಿಮೆಯು 130 ಕೆ.ಜಿ ತೂಕ ಮತ್ತು 5.25 ಅಡಿ ಎತ್ತರವಿದೆ. ಗಣೇಶನ ಮೂರ್ತಿಯನ್ನು ಕಾಂಚಿಪುರಂನಲ್ಲಿ ಕಳ್ಳಸಾಗಣೆ ಮಾಡಿ ವಿದೇಶಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಈ ಬಗ್ಗೆ ಕೂಡಲೇ ದಾಳಿ ನಡೆಸಿದ ಅಧಿಕಾರಿಗಳು ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಪ್ರತಿಮೆ ಕಳ್ಳತನದಲ್ಲಿ ಭಾಗಿಯಾಗಿರುವವರಿಗಾಗಿ ಶೋಧ ನಡೆಸಲಾಗುತ್ತಿದೆ.