ತಿರುಚ್ಚಿ(ತಮಿಳುನಾಡು): ಇಲ್ಲಿನ ತಿರುವೆರುಪುರ್ನ ಕತ್ತೂರ್ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯ ಶೌಚಾಲಯದಲ್ಲಿ ಶೌಚಾಲಯದಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಶಾಲಾ ಶೌಚಾಲಯದಲ್ಲಿ ಗಂಡು ಮಗುವಿನ ಶವ ಪತ್ತೆಯಾಗಿದ್ದು, ಶಿಶು ಜನಿಸಿ ಒಂದು ಗಂಟೆಯಾಗಿರಬಹುದು ಎನ್ನಲಾಗ್ತಿದೆ.
ಮಗುವಿನ ಮೃತದೇಹವನ್ನು ಮಹಾತ್ಮಕ ಗಾಂಧಿ ಮೆಮೋರಿಯಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮೃತದೇಹ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲಾ ಕಟ್ಟಡದ ಆವರಣದ ಶೌಚಾಲಯದಲ್ಲಿ ಮಗು ಹುಟ್ಟಿದೆಯಾ ಅಥವಾ ಬೇರೆ ಯಾರಾದರೂ ಮಗುವನ್ನು ತಂದು ಶಾಲೆಯ ಶೌಚಾಲಯದಲ್ಲಿ ಎಸೆದು ಹೋಗಿದ್ದಾರಾ ಎಂಬುದರ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದರ ಜೊತೆಗೆ ಆದಿತ್ ದ್ರಾವಿಡ ಕಲ್ಯಾಣ ಇಲಾಖೆ ತಹಶೀಲ್ದಾರ್ ಚಂದ್ರದೆವನತ್ತನ್ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಯಾರಾದರೂ ವಿದ್ಯಾರ್ಥಿನಿಯ ಮಗು ಇರಬಹುದು ಎಂಬ ಆಯಾಮದಲ್ಲೂ ಗಂಭೀರ ತನಿಖೆಗೆ ನಡೆಯುತ್ತಿದೆ. ಅಲ್ಲದೇ, ಈ ರೀತಿಯ ಪ್ರಕರಣ ಶಾಲಾ ಆವರಣದಲ್ಲಿ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲು ಸೆಕ್ಯೂರಿಟಿ ಗಾರ್ಡ್ ಅನ್ನು ನೇಮಕ ಮಾಡಲಾಗಿದೆ. ಶಾಲಾ ಆವರಣದ ಸುತ್ತಮುತ್ತಲು ಪರಿಶೀಲನೆಗೆ ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಪೆಡಂಭೂತ.. ತಾಯಿ, 3 ವರ್ಷದ ಮಗಳಿಗೆ ಬೆಂಕಿ ಹಚ್ಚಿದ ಕೀಚಕರು