ETV Bharat / crime

ಗೋಡೆ ಕುಸಿದು ಸೂರತ್​ನಲ್ಲಿ ಐವರು ಮೃತಪಟ್ಟಿರುವ ಶಂಕೆ.. ದೇಶದಲ್ಲಿಂದು ಜವರಾಯನ ಅಟ್ಟಹಾಸಕ್ಕೆ ಇನ್ನೆಷ್ಟು ಬಲಿ? - ಸೂರತ್​ ದುರಂತ

ದೇಶದಲ್ಲಿಂದು ಬೆಳಗ್ಗೆಯಿಂದ ಮಧ್ಯಾಹ್ನದೊಳಗೆ ನಡೆದ ದುರಂತದಲ್ಲಿ 30ಕ್ಕೂ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಗುಜರಾತ್​ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.

At least 5 feared burried 20 feet under the collapsed wall in Surat
ಗುಜರಾತ್​ನ ಸೂರತ್​ನ ವರಾಚಾ ಪ್ರದೇಶದಲ್ಲಿ ಗೋಡೆ ಕುಸಿತ
author img

By

Published : Mar 23, 2021, 2:14 PM IST

ಸೂರತ್​: ಗುಜರಾತ್​ನ ಸೂರತ್​ನ ವರಾಚಾ ಪ್ರದೇಶದಲ್ಲಿ ಗೋಡೆ ಕುಸಿದು 20 ಅಡಿಯಷ್ಟು ಮಣ್ಣನಡಿಯಲ್ಲಿ ಹಲವರು ಸಿಲುಕಿದ್ದು, ಕನಿಷ್ಠ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸ್​ ಇಲಾಖೆ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಗುಜರಾತ್​ನ ಸೂರತ್​ನ ವರಾಚಾ ಪ್ರದೇಶದಲ್ಲಿ ಗೋಡೆ ಕುಸಿತ

ದೇಶದಲ್ಲಿಂದು ಬೆಳಗ್ಗೆಯಿಂದ ಮಧ್ಯಾಹ್ನದೊಳಗೆ ನಡೆದ ದುರಂತದಲ್ಲಿ 20ಕ್ಕೂ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿಬಸ್ - ಆಟೋ ಡಿಕ್ಕಿಯಾಗಿ 13 ಜನರು ಸಾವನ್ನಪ್ಪಿದ್ದರು. ಬಳಿಕ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಹೊಡೆದು ಆರು ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ದುರಂತ: ಐವರು ಬಲಿ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಕೂಲಿ ಕಾರ್ಮಿಕರು ಅಸುನೀಗಿದ್ದರು. ಇದೀಗ ಗುಜರಾತ್​ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.