ಬೆಂಗಳೂರು: ನಗರದ ಪಶ್ಚಿಮ ವಿಭಾಗ ಉಪ್ಪಾರಪೇಟೆ ಪೊಲೀಸರು ಕಾರ್ಯಾಚರಣೆ ನೆಡೆಸಿ, ಟಿವಿ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಓದಿ: ಎಸ್ಐಟಿಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೇವೆ: ಸಚಿವ ಬೊಮ್ಮಾಯಿ
ವಿಜಯ್ ಅಶೋಕ ಕಾಳೆ ಹಿರೇಮಠ್ ಬಂಧಿತ ಆರೋಪಿಯಾಗಿದ್ದು, ಲಾಡ್ಜ್ಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿ ರೂಮಿನ ಎಲ್ಸಿಡಿ ಟಿವಿ, ಮೊಬೈಲ್ ಕಳ್ಳತನ ಮಾಡುತ್ತಿದ್ದ. ಇದೇ ರೀತಿ ಉಪ್ಪಾರಪೇಟೆಯ ವಿಷ್ಣು ಪ್ಯಾರಡೈಸ್ ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದಾನೆ. ರೂಮ್ನಿಂದ ಚೆಕ್ ಔಟ್ ಆದ ನಂತರ ಎಲ್ಸಿಡಿ ಟಿವಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಉಪ್ಪಾರಪೇಟೆ ಠಾಣೆಗೆ ಹೋಟೆಲ್ ಮ್ಯಾನೇಜರ್ ದೂರು ದಾಖಲಿಸಿದ್ದಾನೆ. ಶೀಘ್ರವಾಗಿ ತನಿಖೆ ಕೈಗೊಂಡ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಬಂಧಿತನಿಂದ 2.70 ಲಕ್ಷ ರೂ. ಬೆಲೆಯ 9 ಎಲ್ಇಡಿ ಟಿವಿ ಹಾಗೂ 4 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.