ಹೈದರಾಬಾದ್: ದೆವ್ವ ಬಿಡಿಸುವ ನೆಪದಲ್ಲಿ ನಕಲಿ ಬಾಬ ಹಾಗೂ ಆತನ ಪುತ್ರ ಮಹಿಳೆ, ಆಕೆಯ ತಂಗಿಯ ಮೇಲೆ 5 ವರ್ಷಗಳಿಂದ ಅತ್ಯಾಚಾರ ಮಾಡಿರುವ ಆರೋಪ ಹೈದರಾಬಾದ್‌ನ ಪಾತ ಬಸ್ತಿಯಲ್ಲಿ ಕೇಳಿ ಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ತಮ್ಮ ಸಂಬಂಧಿಕರ ಸೂಚನೆ ಮೇರೆಗೆ ನಕಲಿ ಬಾಬ ಬಳಿಗೆ ಬಂದಿದ್ದಾಳೆ. ಈಕೆಗೆ ದೆವ್ವ ಹಿಡಿದಿದೆ ಎಂದು ನಂಬಿಸಿ ಅದನ್ನು ಹೋಗಲಾಡಿಸಬೇಕೆಂದು ಮನೆಯೊಳಗೆ ಕರೆದೊಯ್ದು ಕಿರಾತಕ, ಇದು ಭೂತದ ವೈದ್ಯಕೀಯ ಅಂತ ಹೇಳಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಸಂತ್ರಸ್ತೆ ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ವಿಚ್ಛೇದನ ಪಡೆದು ಪತ್ಯೇಕವಾಗಿ ವಾಸವಾಗಿದ್ದಾಳೆ. ಇಲ್ಲೂ ಕೂಡ ಈ ಫಕೀರ ತನ್ನ ಕೈಚಳಕವನ್ನು ಪ್ರದರ್ಶಿಸಿದ್ದು, ಆಕೆಯೊಂದಿಗೆ ಮತ್ತೆ ಸಂಬಂಧ ಬೆಳೆಸುವ ಸಲುವಾಗಿ ತನ್ನ ಮಂತ್ರ ವಿದ್ಯಗಳ ಪ್ರಯೋಗ ಮಾಡಿದ್ದಾನೆ.
ವಿಚ್ಛೇದನ ನೀಡಿರುವ ನಿನ್ನ ಪತಿ ನಿನಗೆ ಮಾಠಮಂತ್ರ ಮಾಡಿಸಿದ್ದಾನೆ ಎಂದು ನಂಬಿಸಿದ್ದಾನೆ. ಬಳಿಕ ಆಕೆ ತನ್ನ ಮನೆಯನ್ನು ಮಾರಿ ಅದರಲ್ಲಿ ಬಂದ ಹಣವನ್ನು ಈ ಮಾಟಗಾರ ಎಗರಿಸಿದ್ದಾನೆ. ಮಹಿಳೆ ಸಮೀಪದ ಬಂಡ್ಲಗೂಡಿಗೆ ಸ್ಥಳಾಂತರ ಗೊಂಡರೂ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಮತ್ತೆ ಈ ಫಕೀರನನ್ನ ಭೇಟಿಯಾಗಿದ್ದಾಳೆ.
ಸಂಸತ್ರಸ್ತೆ ತಂಗಿಯ ಮೇಲೂ ಅತ್ಯಾಚಾರ!
Rape on young girl: 2016ರಿಂದಲೂ ಮಹಿಳೆಯನ್ನು ಅನುಭವಿಸಿದ್ದ ಮಾಠಗಾರ, ಸಂತ್ರಸ್ತೆಯ ಜೊತೆಯಲ್ಲಿ ಬಂದಿದ್ದ ತಂಗಿಯ ಮೇಲೂ ಕಣ್ಣುಹಾಕಿದ್ದಾನೆ. ಮಂತ್ರಗಳ ಹೆಸರಿನಲ್ಲಿ ಈಕೆಗೂ ಭಯ ಹುಟ್ಟಿಸಿ ಲೈಂಗಿಕ ಸುಖವನ್ನು ಅನುಭವಿಸಿದ್ದಾನೆ. ಇವನಷ್ಟೇ ಅಲ್ಲದೇ, ಆರೋಪಿಯ ಪುತ್ರ ಸಯ್ಯದ್ ಅಫ್ರೋಜ್ ಕೂಡ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ವೈದಿಕ ಹೆಸರಿನಲ್ಲಿ ಭಯಹುಟ್ಟಿಸಿದ್ದ ಕಾರಣ ಅಕ್ಕ, ತಂಗಿ ಹೊರಗಡೆ ಹೇಳಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ, ಯಾವಾಗ ನಕಲಿ ಬಾಬಾನ ಹಿಂಸೆ ಹೆಚ್ಚಾಯಿತೋ ಆಗ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡ ಪೊಲೀಸರು ನಕಲಿ ಬಾಬಾ ಆತನ ಪುತ್ರನನ್ನು ಬಂಧಿಸಿದ್ದಾರೆ. ಇವರಿಂದ ತಾಯ್ತಗಳು, ಗೋಡಂಬಿ, ಸಾಂಬ್ರಾಣಿ ಧೂಪ ವಶಕ್ಕೆ ಪಡೆಯಲಾಗಿದೆ.