ETV Bharat / crime

ಬಾವಿಗೆ ಕಾಲುಜಾರಿ ಬಿದ್ದು ಬಾಲಕಿ ಸಾವು.. ದೂರು ದಾಖಲು - ಬಾವಿಗೆ ಕಾಲು ಜಾರಿ

ಬಾಲಕಿಯೊಬ್ಬಳು ಬಾವಿಗೆ ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.

Firefighters operation to  extract girl's body Bharat
ಬಾಲಕಿ ಶವ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ
author img

By

Published : Nov 10, 2022, 12:19 PM IST

ರಾಯಚೂರು: ಬಾಲಕಿಯೊಬ್ಬಳು ಬಾವಿಗೆ ಕಾಲು ಜಾರಿ ಬಿದ್ದ ಪರಿಣಾಮ ಸಾವಿಗೀಡಾದ ಘಟನೆ ಜಿಲ್ಲೆಯ ಮಸ್ಕಿ ತಾಲೂಕು ಕುಣೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಮೇಘಾ(17) ಮೃತ ಬಾಲಕಿ.

ಬಾವಿಯೊಳಗಿನ ಮೀನು ನೋಡಲು ಹೋಗಿದ್ದ‌ ಬಾಲಕಿ ಅಕಸ್ಮಿಕವಾಗಿ ಜಾರಿ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಬಾಲಕಿ ಮೇಲೆ ಬರಲು ಎಷ್ಟೇ ಪ್ರಯತ್ನಪಟ್ಟರೂ, ನೀರಿನ ಕೆಳಗೆಡೆ ಕೆಸರಿನಲ್ಲಿ ಸಿಲುಕಿದ ಪರಿಣಾಮ ಅವಳು ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎನ್ನಲಾಗ್ತಿದೆ.

ಬಾಲಕಿ ಶವ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದೆ. ಮಗಳು ನೀರುಪಾಲಾಗಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಮೀಪದ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬಿಹಾರ: ಒಂದೇ ಕುಟುಂಬದ ಐದು ಮಂದಿ ವಿಷ ಸೇವಿಸಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.