ETV Bharat / crime

ವಿಷಕಾರಿ ಮದ್ಯ ಸೇವಿಸಿ ನಾಲ್ವರು, ವಿಷಪೂರಿತ ಆಹಾರ ಸೇವಿಸಿ ಇಬ್ಬರು ಸಾವು - Uttar Pradesh

ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ವಿಷಕಾರಿ ಮದ್ಯ ಸೇವಿಸಿ ನಾಲ್ವರು, ವಿಷಪೂರಿತ ಆಹಾರ ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

4 died in muzaffarpur drinking poisonous liquor
ವಿಷಕಾರಿ ಮದ್ಯ ಸೇವಿಸಿ ನಾಲ್ವರು, ವಿಷಪೂರಿತ ಆಹಾರ ಸೇವಿಸಿ ಇಬ್ಬರು ಸಾವು
author img

By

Published : Feb 20, 2021, 7:03 AM IST

ಮುಜಾಫರ್​ಪುರ/ಲಖನೌ: ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿ ದಂಪತಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಮುಜಾಫರ್​ಪುರ ಜಿಲ್ಲೆಯ ದರ್ಗಾ ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಚಂದ್ರ ಹಾಗೂ ಅವರ ಪತ್ನಿ ಮಂಜು ದೇವಿ ನಿನ್ನೆ ಸಾವನ್ನಪ್ಪಿದ್ದು, 24 ಗಂಟೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ವಿಷಕಾರಿ ಮದ್ಯ ಸೇವನೆಯೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಪ್ರೀತಿ ಒಪ್ಪದಿದ್ದಕ್ಕೆ ಕುಡಿಯೋ ನೀರಲ್ಲಿ ಕೀಟನಾಶಕ ಬೆರೆಸಿ ದಲಿತ ಬಾಲಕಿಯರ ಕೊಲೆ: ಆರೋಪಿಗಳ ಸೆರೆ

ಉತ್ತರ ಪ್ರದೇಶದ ಲಖನೌನ ರಾಮ್‌ನಗರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದರು. ಇವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮಾರುಕಟ್ಟೆಯಿಂದ ಚಿಕನ್​ ತಂದು ತಿಂದ ಬಳಿಕ ಹೀಗಾಗಿದೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.