ಜೈಪುರ (ರಾಜಸ್ಥಾನ): 13 ವರ್ಷದ ಬಾಲಕಿ ಮೇಲೆ ನೆರೆ ಮನೆಯ ವ್ಯಕ್ತಿಯೇ ಅತ್ಯಾಚಾರವೆಸಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೈಪುರದ ಪ್ರತಾಪ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿಯ ಪೋಷಕರು ಮನೆಯಲ್ಲಿರದ ವೇಳೆ ಆಕೆಯನ್ನು ಯಾವುದೋ ಕೆಲಸದ ನೆಪದಲ್ಲಿ ತನ್ನ ಮನೆಗೆ ಕರೆಯಿಸಿಕೊಂಡ ಕಾಮುಕ ಈ ಕೃತ್ಯ ಎಸಗಿದ್ದಾನೆ. ರಕ್ತಸಿಕ್ತ ಸ್ಥಿತಿಯಲ್ಲಿ ಅಪ್ರಾಪ್ತೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಮನೆಗೆ ಹಿಂದಿರುಗಿದಾಗ ಮಗಳನ್ನು ಕಂಡು ಆಘಾತಕ್ಕೊಳಗಾದ ತಾಯಿ, ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪ್ರತಾಪ್ ನಗರ ಪೊಲೀಸರು ಸಂತ್ರಸ್ತೆಯನ್ನು ನಗರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಶೋ ರೂಂಗೆ ನುಗ್ಗಿ 32 ಲಕ್ಷ ಮೌಲ್ಯದ ಎರಡು ಕಾರು ಕದ್ದ ಖದೀಮರು
ಬಾಲಕಿ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.