ETV Bharat / city

ತುಮಕೂರು: ಒಂದು ದಶಕದ ಹಿಂದೆ ಬಂದ್ ಮಾಡಿದ್ದ ಸರ್ಕಾರಿ ಶಾಲೆ ರೀ ಓಪನ್​ - tumkur ReOpen School news

ಖಾಸಗಿ ಶಾಲೆ ಆರ್ಭಟದಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆಯನ್ನು ಒಂದು ದಶಕದ ಬಳಿಕ ಗ್ರಾಮಸ್ಥರು ತೆರೆದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

School, ಸರ್ಕಾರಿ ಶಾಲೆ
School
author img

By

Published : Nov 29, 2021, 2:16 PM IST

ತುಮಕೂರು: ಸುಮಾರು ಒಂದು ದಶಕದ ಹಿಂದೆ ಬಂದ್ ಮಾಡಲಾಗಿದ್ದ ಸರ್ಕಾರಿ ಶಾಲೆಯನ್ನು ಗ್ರಾಮಸ್ಥರು ಪುನಃ ಬಾಗಿಲು ತೆರೆಸುವಲ್ಲಿ ಯಶಸ್ವಿಯಾಗಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಕ್ಲಸ್ಟರ್ ವ್ಯಾಪ್ತಿಯ ಯರೇಕಟ್ಟೆ ಗ್ರಾಮದಲ್ಲಿ ನಡೆದಿದೆ.

ಖಾಸಗಿ ಶಾಲೆಗಳ ಭರಾಟೆಯ ನಡುವೆ ವಿದ್ಯಾರ್ಥಿಗಳ ಕೊರತೆಯಿಂದಾಗಿ 10 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ಸರ್ಕಾರಿ ಶಾಲೆಯನ್ನು ಪುನಃ ಆರಂಭಿಸುವಂತೆ ಶಿಕ್ಷಣ ಇಲಾಖೆಗೆ ದುಂಬಾಲು ಬಿದ್ದ ಗ್ರಾಮಸ್ಥರು, ಶಾಲೆಗೆ ಮರುಜೀವ ನೀಡಿದ ಸಂತಸದಲ್ಲಿದ್ದಾರೆ. ಈ ಮೂಲಕ ಮತ್ತೆ ಶಾಲಾ ಆವರಣಲ್ಲಿ ಮಕ್ಕಳ ಚಿಲಿಪಿಲಿ ಕಲರವ ಕೇಳುವಂತಾಗಿದೆ.

ಇದನ್ನೂ ಓದಿ: ಬಿಟ್​ಕಾಯಿನ್​ ಕರೆನ್ಸಿಯಾಗಿ ರೂಪಾಂತರಿಸಲ್ಲ: ಸಚಿವೆ ನಿರ್ಮಲಾ ಸೀತಾರಾಮನ್​

ಅಂದಾಜು 30 ಕುಟುಂಬಗಳು ಯರೇಕಟ್ಟೆ ಗ್ರಾಮದಲ್ಲಿ ವಾಸಿಸುತ್ತಿವೆ. ಅಕ್ಕಪಕ್ಕದ ಗ್ರಾಮಗಳ ಮಕ್ಕಳು ಸಹ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದ್ರೆ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾದ ಪೋಷಕರು, ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕತೊಡಗಿದ್ದರು. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿತ್ತು.

ಇದನ್ನೂ ಓದಿ: ಲೋಕಸಭೆಯಲ್ಲಿ 'ಕೃಷಿ ಕಾನೂನುಗಳ ರದ್ದತಿ ಮಸೂದೆ-2021' ಅಂಗೀಕಾರ

ಇತ್ತೀಚಿನ ದಿನಗಳಲ್ಲಿ ಗ್ರಾಮಕ್ಕೆ ಶಾಲೆಯ ಅವಶ್ಯಕತೆ ಇದೆ ಎಂಬುದನ್ನು ಅರಿತ ಜನರು, ಮುಚ್ಚಿದ್ದ ಕಿರಿಯ ಪ್ರಾಥಮಿಕ ಶಾಲೆಯನ್ನು ಪತ್ತೆ ಬಾಗಿಲು ತೆರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.