ETV Bharat / city

ಕೌಟುಂಬಿಕ ಕಲಹ: ಬ್ಲೇಡ್​ನಿಂದ ಕತ್ತು, ಕೈ ಕೊಯ್ದುಕೊಂಡು ಠಾಣೆ ಎದುರೇ ಯುವಕನ ರಂಪಾಟ - ಕೌಟುಂಬಿಕ ಕಲಹ

ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಠಾಣೆ ಎದುರು ಬ್ಲೇಡ್​ನಿಂದ ಕತ್ತು, ಕೈ - ಕೊಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ.

family issue young man drama in front of police station

author img

By

Published : Jul 8, 2022, 7:15 PM IST

ತುಮಕೂರು: ಕೌಟುಂಬಿಕ ಕಲಹದಿಂದ ಬೇಸತ್ತ ಯುವಕ ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆ ಎದುರೇ ಬ್ಲೇಡ್​ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ. ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಬಿಳಿ ದೇವಾಲಯ ಗ್ರಾಮದ ಅಬ್ರಾಜ್ ಈ ರೀತಿ ನಡೆದು ಕೊಂಡ ಯುವಕ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಬ್ರಾಸ್ ವಿರುದ್ಧ ಆತನ ಪತ್ನಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಆ ವೇಳೆ ಅಲ್ಲಿಗೆ ಬಂದ ಅಬ್ರಾಜ್ ಅಂಗಿ ಬಿಚ್ಚಿ ಬ್ಲೇಡ್ ನಿಂದ ಕತ್ತು, ಕೈ ಹಾಗೂ ಮೈ ಭಾಗವನ್ನು ಕೊಯ್ದುಕೊಂಡಿದ್ದಾನೆ. ಆತನ ಹುಚ್ಚಾಟ ಕಂಡು ನಾಗರೀಕರು ಬೆಚ್ಚಿ ಬಿದ್ದಿದ್ದಾರೆ.

ಕೌಟುಂಬಿಕ ಕಲಹಕ್ಕೆ ಬ್ಲೇಡ್​ನಿಂದ ಕತ್ತು, ಕೈ ಕೊಯ್ದುಕೊಂಡು ಠಾಣೆ ಎದುರೇ ಯುವಕನ ರಂಪಾಟ

ಕೌಟುಂಬಿಕ ಕಲಹದ ಬಗ್ಗೆ ಮೂರು ಬಾರಿ ದೂರು ನೀಡಲು ಬಂದಿದ್ದೆ. ದೂರು ಕೊಡಲು ಬಂದಾಗ ಪೊಲೀಸರು ಹೊಡೆದಿದ್ದರು. ಆದರೆ ಮೂರು ಬಾರಿಯೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಅದಕ್ಕಾಗಿ ಈ ರೀತಿ ಮಾಡಿಕೊಂಡಿದ್ದಾಗಿ ಅಬ್ರಾಜ್ ಹೇಳಿದ್ದಾನೆ. ನಂತರ ಆತನೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ: ಜೂಜುಕೋರರಿಂದ ನೆಲಮಂಗಲ ಇನ್​​ಸ್ಪೆಕ್ಟರ್​ ಮೇಲೆ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.