ತುಮಕೂರು: ತಾಯಿ ಮತ್ತು ಮಗು ಆರೋಗ್ಯ ಸೇವೆಯನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರದ ಆದೇಶದಂತೆ ಸ್ಥಳಾಂತರ ಮಾಡಲಾಗಿದ್ದು, ಏಳು ಮಂದಿ ಕೊರೊನಾ ಸೋಂಕಿತರು ಸೇರಿದಂತೆ 60 ಮಂದಿ ಶಂಕಿತರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಆವರಣಕ್ಕೆ ಸ್ಥಳಾಂತರ ಮಾಡಿರುವ ನಿರ್ಧಾರ ಸಾಕಷ್ಟು ಟೀಕೆಗೆ ಒಳಗಾಗಿದೆ.