ತುಮಕೂರು : ಶಾಸಕ ಯತ್ನಾಳ್ ಅವರ ಬಳಿ ಪಕ್ಷದ ಶಿಸ್ತು ಸಮಿತಿಯಿಂದ ಅವರ ವಿವರಣೆ ಕೇಳ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ರೆ, ಯತ್ನಾಳ್ ಹೇಳಿಕೆಗೆ ತಾನು ಈ ಸಂದರ್ಭದಲ್ಲಿ ಏನು ರಿಯಾಕ್ಟ್ ಮಾಡೋದಕ್ಕೆ ಆಗಲ್ಲಾ ಅಂತಾ ಗೃಹ ಸಚಿವರು ಹೇಳಿದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಟೀಲ್, ಇಲ್ಲಿಯ ಮಾಹಿತಿಗಳನ್ನ ಕೇಂದ್ರದ ಶಿಸ್ತು ಸಮಿತಿಗೆ ನಾವು ಕಳಿಸಿದ್ದೇವೆ. ಕೇಂದ್ರ ಶಿಸ್ತು ಸಮಿತಿ ಅವರಿಂದ ವಿವರಣೆ ಕೇಳ್ತಾರೆ. ಅವರು ಯಾವ ಭಾವನೆಯಿಂದ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿಯಲ್ಲಿ ದೊಡ್ಡವರು, ಸಣ್ಣವರು ಅಂತಾ ಪ್ರಶ್ನೆ ಇಲ್ಲ.
ನಾಯಕತ್ವ ಎನ್ನುವಂತದ್ದು ಕಾರ್ಯಕರ್ತರ ಆಧಾರದ ಮೇಲೆ ನಿರ್ಮಾಣ ಆಗುತ್ತೆ. ಈ ಹಿಂದೆ ಎರಡು ಬಾರಿ ಅವರಿಗೆ ನೋಟಿಸ್ ಕೊಡಲಾಗಿತ್ತು. ಅದಕ್ಕೆ ಅವರು ಉತ್ತರಿಸಿದ್ದಾರೆ. ಅವರು ರಾಜಕೀಯದ ವ್ಯವಸ್ಥೆ ಬಗ್ಗೆ ಹೇಳಿದ್ದಾರೆ. ಅದು ಅವರ ಭಾವನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಓದಿ: ಸಿಎಂ ಹುದ್ದೆಗಾಗಿ ಲಂಚ ಸತ್ಯ ಇರ್ಬೋದು ಎಂದ ಸಿದ್ದರಾಮಯ್ಯ: ತನಿಖೆ ನಡೆಸಲು ಸತೀಶ್ ಜಾರಕಿಹೊಳಿ ಆಗ್ರಹ
ಯತ್ನಾಳ್ ಹೇಳಿಕೆಗೆ ನಾನು ಈ ಸಂದರ್ಭದಲ್ಲಿ ಏನು ರಿಯಾಕ್ಟ್ ಮಾಡೋದಕ್ಕೆ ಆಗಲ್ಲಾ. ರಾತ್ರಿಯಿಂದ ಅವರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇವೆ. ಅವರು ಸಿಕ್ತಿಲ್ಲಾ. ಸಹಜವಾಗಿ ರಾಜಕಾರಣದಲ್ಲಿ ಇಂತವೆಲ್ಲಾ ಇರುತ್ತದೆ ಎಂದು ಅವರು ಹೇಳಿರಬಹುದು. ನಿರ್ಧಿಷ್ಟವಾಗಿ ಇದೇ ಪಕ್ಷ ಎಂದು ಹೇಳಿರಲ್ಲ.
ಪಕ್ಷದ ವಿರುದ್ದವೇ ಅವರು ಹೇಳಿದ್ದಾದರೇ ಖಂಡಿತ ಅದು ಪಕ್ಷಕ್ಕೆ ಮುಜುಗರ ಬರುವ ವಿಚಾರ. ಹಾಗೇ ಮಾತಾಡಿದ್ದರೆ ಸಂಘಟನೆ ನೇತಾರರು ಕರೆದು ಅವರನ್ನ ಮಾತಾಡಿಸ್ತಾರೆ ಎಂದು ಗೃಹ ಸಚಿವ ಆರಗ ಜ್ಙಾನೇಂದ್ರ ಹೇಳಿದ್ದಾರೆ. ಪಿಎಸ್ಐ ಪರೀಕ್ಷೆ ಅಕ್ರಮ ಎಲ್ಲೇ ನಡೆಯಲಿ ಅದನ್ನು ತಪಾಸಣೆ ಮಾಡ್ತಿದ್ದಾರೆ.
ಅಷ್ಟೂ ಪರೀಕ್ಷಾ ಕೇಂದ್ರಗಳ ತಪಾಸಣೆ ನಡೆಯುತ್ತಿದೆ. ತುಮಕೂರಿನಲ್ಲಿ ನಡೆದಿದೆಯೋ ಅಥವಾ ಇಲ್ಲವೋ ಅಂತೇಳಿ ಕೆದಕುತ್ತಿದ್ದಾರೆ. ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದವರು ಆತ್ಮವಿಶ್ವಾಸದಿಂದ ಇನ್ನೊಮ್ಮೆ ಪರೀಕ್ಷೆ ಬರೆಯಲಿ ಎಂದರು. ಸರ್ಕಾರಕ್ಕೆ ಮರುಪರೀಕ್ಷೆ ಅನಿವಾರ್ಯ. ಕಿಮ್ಮನೆ ರತ್ನಾಕರ್ ಅಂತಹ ಸಿಲ್ಲಿ ರಾಜಕಾರಣಿಗೆ ನಾನು ಪ್ರತಿಕ್ರಿಯಿಸಲ್ಲ.
ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ನವರು ಏನ್ ಬೇಕಾದ್ರು ಹೇಳ್ತಾರೆ. ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ನಾಲ್ಕು ಬಾರಿ ಪಿಯುಸಿ ಪರೀಕ್ಷೆ ಲೀಕಾಯ್ತು. ಏಳು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಆಗಿನ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ಗೆ ನಾಚಿಕೆ ಆಗಬೇಕು. ಮುಂದಿನ ಪಿಎಸ್ಐ ಪರೀಕ್ಷೆಯಲ್ಲಿ ಅಭ್ಯರ್ಥಿ ವಯಸ್ಸಿಗೆ ತೊಂದರೆಯಾಗಲ್ಲ ಎಂದರು.