ETV Bharat / city

ಸ್ಮಾರ್ಟ್ ಸಿಟಿ ವತಿಯಿಂದ ಸಾರ್ವಜನಿಕರಿಗಿರುವ ಸೌಲಭ್ಯಗಳ ಮಾಹಿತಿ ಕೊರತೆ!? - smart city projects failure

ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು ನಲವತ್ತು ಕಡೆಗಳಲ್ಲಿ ಎಮರ್ಜೆನ್ಸಿ ಪೋಲ್​​ಗಳನ್ನು ಅಳವಡಿಸಲಾಗಿದೆ. ಆದರೆ, ಇವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದೆ..

lack of information of smart city public facilities
ಸ್ಮಾರ್ಟ್ ಸಿಟಿ ವತಿಯಿಂದ ಸಾರ್ವಜನಿಕರಿಗಿರುವ ಸೌಲಭ್ಯಗಳ ಮಾಹಿತಿ ಕೊರತೆ
author img

By

Published : May 15, 2022, 5:14 PM IST

ತುಮಕೂರು : ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ವಿನೂತನ ತಂತ್ರಜ್ಞಾನವನ್ನು ಬಳಕೆ ಮಾಡಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರ ಅಗತ್ಯಕ್ಕೆ ಪೂರಕವಾಗಿ ನೂತನ ತಂತ್ರಜ್ಞಾನ ಬಳಕೆಯ ಸೌಲಭ್ಯಗಳು ನಗರದ ವಿವಿಧೆಡೆ ಕಾಣಸಿಗುತ್ತವೆ. ಆದರೆ, ಅವುಗಳ ಅರಿವು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಜೊತೆಗೆ ಅನೇಕ ಯೋಜನೆಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ. ಒಂದಿಷ್ಟು ಕಡೆಗಳಲ್ಲಿ ಯಂತ್ರಗಳು ಹದಗೆಟ್ಟು ನಿಂತಿವೆ.

ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು ನಲವತ್ತು ಕಡೆಗಳಲ್ಲಿ ಎಮರ್ಜೆನ್ಸಿ ಪೋಲ್​​ಗಳನ್ನು ಅಳವಡಿಸಲಾಗಿದೆ. ಈ ಪೋಲ್​ಗಳ ಮೂಲಕ ಸಾರ್ವಜನಿಕರು ನಗರದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಕಂಟ್ರೋಲ್ ರೂಮ್​​ಗೆ ತಮ್ಮ ಮಾಹಿತಿ ನೀಡಬಹುದಾಗಿದೆ. ತುಮಕೂರು ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಮ್​​ನಲ್ಲಿ ಇರುವ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ.

ಸ್ಮಾರ್ಟ್‌ಸಿಟಿ ವತಿಯಿಂದ ಸಾರ್ವಜನಿಕರಿಗಿರುವ ಸೌಲಭ್ಯಗಳ ಮಾಹಿತಿ ಕೊರತೆ..

ಇಲ್ಲಿ ಮಾಹಿತಿ ಲಭ್ಯವಾದ ತಕ್ಷಣ ಸಂಬಂಧಪಟ್ಟ ಪೊಲೀಸರು, ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ಈ ಮೂಲಕ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಇದು ಸಹಕಾರಿಯಾಗುತ್ತದೆ. ಮುಖ್ಯವಾಗಿ ಮಹಿಳೆಯರ ಮೇಲಿನ ಹಲ್ಲೆ, ಅಪಘಾತ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳದಿಂದಲೇ ಈ ಪೋಲ್​ಗಳ ಮೂಲಕ ಸಹಾಯ ಪಡೆಯಬಹುದಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ : ವಿಶ್ವ ದಾಖಲೆ ಸೃಷ್ಟಿಸಿದ ಬೃಹತ್ ಆರೋಗ್ಯ ಮೇಳ

ಆದರೆ, ಇದರ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಕೆಲ ಯಂತ್ರಗಳು ಹಾಳಾಗಿವೆ. ಕೆಲ ಸ್ಮಾರ್ಟ್ ಪೋಲ್​ಗಳು ಧೂಳಿಡಿದು ನಿಂತಿವೆ. ಹೀಗಾಗಿ, ಸಂಬಂಧಪಟ್ಟವರು ಇತ್ತ ಗಮನಹರಿಸಿ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮಾಡಬೇಕಿದೆ. ಅಲ್ಲದೇ ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.