ETV Bharat / city

ಶಿವಮೊಗ್ಗದಲ್ಲಿ ಕಾಡಾನೆ ಹಾವಳಿ ತೀವ್ರ: ಅಡಿಕೆ ತೋಟ ನಾಶ, ಗೃಹ ಸಚಿವರಿಂದ ಪರಿಹಾರದ ಭರವಸೆ - elephants problem

ಕಳೆದ 15 ದಿನಗಳಿಂದ ಕಾಡಾನೆ ಹಾವಳಿ ಹೆಚ್ಚಿದ್ದು ತೀರ್ಥಹಳ್ಳಿ, ಹೊಸನಗರದ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

wild elephants destroying crops at shivamogga
ಶಿವಮೊಗ್ಗದಲ್ಲಿ ಕಾಡಾನೆ ಹಾವಳಿ
author img

By

Published : Mar 20, 2022, 9:30 AM IST

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರಗಳಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆ ಹಾವಳಿ ಹೆಚ್ಚಿದೆ. ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಶಿವಮೊಗ್ಗ ಜಿಲ್ಲೆಗೆ ಲಗ್ಗೆಯಿಡುವ ಕಾಡಾನೆಗಳು ಅಡಿಕೆ ತೋಟ, ಬೆಳೆಗಳನ್ನು ಧ್ವಂಸಗೊಳಿಸುತ್ತಿವೆ. ಪರಿಣಾಮ, ಫಸಲಿಗೆ ಬಂದಿರುವ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ರೈತರು.

ಬೇಸಿಗೆ ಆರಂಭವಾಗಿರುವುದರಿಂದ ಆನೆಗಳಿಗೆ ಕಾಡಿನಲ್ಲಿ ಸಮರ್ಪಕ ಆಹಾರ ಸಿಗುತ್ತಿಲ್ಲ. ಹೀಗಾಗಿ ಕಾಡಿಗೆ ಹೊಂದಿಕೊಂಡಂತಿರುವ ಅಡಿಕೆ ತೋಟಗಳಿಗೆ ಅವು ದಾಂಗುಡಿ ಇಡುತ್ತಿವೆ. ಈಗಾಗಲೇ ಅಪಾರ ಪ್ರಮಾಣದ ಅಡಿಕೆ ಮರಗಳು ನೆಲಸಮವಾಗಿದೆ. ತೀರ್ಥಹಳ್ಳಿ ತಾಲೂಕಿನ ತಳಲೆ, ಕೀಗಡಿ ಭಾಗ ಹಾಗೂ ಹೊಸನಗರ ತಾಲೂಕಿನ ಬೆಳ್ಳೂರು ಹಾಗೂ ತಳಲೆ ಭಾಗದಲ್ಲಿ ಮೂರು ಕಾಡಾನೆಗಳಿವೆ ಎನ್ನಲಾಗುತ್ತಿದೆ.

ಅಡಿಕೆ ಮರಗಳ ನಾಶ: ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮದಿಂದ ಹೊಸನಗರ ತಾಲೂಕಿನ ತಳಲೆ ಗ್ರಾಮದವರೆಗೆ ದಟ್ಟ ಅರಣ್ಯ ಪ್ರದೇಶವಿದೆ. ಇಲ್ಲಿ ವಾಸ್ತವ್ಯ ಕಂಡುಕೊಂಡಿರುವ ಕಾಡಾನೆಗಳು ರಾತ್ರಿ ವೇಳೆ ತಮ್ಮ ಆಹಾರಕ್ಕಾಗಿ ರೈತರ ತೋಟಗಳತ್ತ ಬರುತ್ತಿವೆ. ಮಧ್ಯರಾತ್ರಿಯ ವೇಳೆಗೆ ತೋಟಗಳ ಮೇಲೆ ದಾಳಿ ನಡೆಸುತ್ತಿದ್ದು ಇನ್ನೇನು ಫಸಲು ಬರಲಾರಂಭಿಸಿವೆ ಎನ್ನುವಂತಹ ಐದಾರು ವರ್ಷದ ಅಡಿಕೆ ಮರಗಳನ್ನು ಧರೆಗುರುಳಿಸಿ ತಿನ್ನುತ್ತಿವೆ. ಬೆಳಗಾಗುವುದರೊಳಗೆ ಮತ್ತೆ ಆನೆಗಳು ಕಾಡಿನೊಳಗೆ ಹೋಗುತ್ತಿವೆ. ಸಂಜೆ ತೋಟದಿಂದ ಮನೆಗೆ ಬಂದ ರೈತರು ಬೆಳಗ್ಗೆದ್ದು ತೋಟಕ್ಕೆ ಹೋದಾಗ ಅಡಕೆ ಮರಗಳು ನೆಲ್ಲಕ್ಕುರುಳಿರುವುದನ್ನು ನೋಡಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಸಚಿವರ ಭೇಟಿ, ಪರಿಹಾರದ ಭರವಸೆ: ತೀರ್ಥಹಳ್ಳಿ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಿನ್ನೆ ತೀರ್ಥಹಳ್ಳಿ ಕ್ಷೇತ್ರದ ಶಾಸಕರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕಾಡಾನೆ ಹಾವಳಿಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸಿದರು. ಜೊತೆಗೆ ಕಾಡಿನ ಅಂಚಿಗೆ ಟ್ರಂಚ್ ಹೊಡೆದು ಆನೆಗಳು ತೋಟಗಳಿಗೆ ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಹಾಗೂ ಆನೆಗಳನ್ನು ಮರಳಿ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಕಾಡಾನೆ ದಾಳಿಯಿಂದ ತೋಟ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದರು.

ಇದನ್ನೂ ಓದಿ: ಪಾತ್ರೆಗಳಲ್ಲಿ ಬಚ್ಚಿಟ್ಟು ಮಾದಕ ವಸ್ತು ಸಾಗಾಟ: ₹9 ಕೋಟಿ‌ಗೂ ಹೆಚ್ಚು ಮೌಲ್ಯದ ಮಾಲು ವಶ

ರೈತರ ಮನವಿ: ಮಲೆನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಹಿಂದೆಲ್ಲಾ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಇದೀಗ ಪ್ರತಿದಿನ ತೋಟಗಳ ಮೇಲೆ ದಾಳಿ ಮಾಡಲಾರಂಭಿಸಿವೆ. ಈ ಆನೆಗಳನ್ನು ಮರಳಿ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.