ಶಿವಮೊಗ್ಗ: ಪುನೀತ್ ನಿಧನದ ನಂತರ ಅಪಾರ ಅಭಿಮಾನಿಗಳಿಗೆ ನಿನ್ನೆ ದೊಡ್ಮನೆ ಕುಟುಂಬಸ್ಥರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಅಪ್ಪು ಪುಣ್ಯ ತಿಥಿ ಹಿನ್ನೆಲೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಹ ಪುನೀತ್ ಅಭಿಮಾನಿಗಳು ಬಾಡೂಟ ಹಾಕಿಸುವ ಮೂಲಕ ನೆಚ್ಚಿನ ನಟನನ್ನು ಸ್ಮರಿಸಿದರು.
ವೀರ ಕೇಸರಿ ಯುವಕ ಸಂಘದವರು ಸಾರ್ವಜನಿಕರಿಗೆ ಬಾಡೂಟವನ್ನು ಏರ್ಪಡಿಸಿದ್ದರು. ಅನ್ನ ಸಂತರ್ಪಣೆಗೂ ಮೊದಲು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿವಿಧ ಖಾದ್ಯಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.
ಪುನೀತ್ ರಾಜ್ ಕುಮಾರ್ ಅವರಿಗೆ ಬಾಡೂಟ ಅಂದ್ರೆ ಬಲು ಇಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಅನ್ನ ಸಂತರ್ಪಣೆ ಕಾರ್ಯ ಹಮ್ಮಿಕೊಂಡಿದ್ದೇವೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ, ಊಟ ಸೇವಿಸಿದ್ದಾರೆ ಎಂದು ಸಂಘದ ಸದಸ್ಯರು ತಿಳಿಸಿದರು.