ಶಿವಮೊಗ್ಗ: ರಸ್ತೆಯಲ್ಲಿ ನಡೆಯುವ ಅಪಘಾತಗಳಲ್ಲಿ ಹೆಚ್ಚಿನವು ಚಾಲಕರ ನಿರ್ಲಕ್ಣ್ಯ ಹಾಗೂ ಅಜಾಗರೂಕತೆಯಿಂದ ನಡೆಯುತ್ತಿವೆ. ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸಿಲ್ಲ.
2019 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1,542 ಅಪಘಾತ ಪ್ರಕರಣಗಳು ನಡೆದಿದೆ. ಇದರಲ್ಲಿ 328 ಪ್ರಕರಣಗಳು ಮಾರಣಾಂತಿಕ ಪ್ರಕರಣಗಳಾಗಿವೆ. 1,214 ಮಾರಣಾಂತಿಕ ವಲ್ಲದ ಪ್ರಕರಣಗಳು ದಾಖಲಾಗಿವೆ. 328 ಮಾರಣಾಂತಿಕ ಪ್ರಕರಣದಲ್ಲಿ 365 ಜನ ಸಾವನ್ನಪ್ಪಿದ್ದಾರೆ. 1,214 ಮಾರಣಾಂತಿಕ ವಲ್ಲದ ಪ್ರಕರಣದಲ್ಲಿ 2,114 ಜನ ಗಾಯಾಳುಗಳಾಗಿದ್ದಾರೆ.
806 ಅಪಘಾತ ಪ್ರಕರಣಗಳು ನಡೆದಿದ್ದು, ಇದರಲ್ಲಿ 163 ಪ್ರಕರಣ ಮಾರಣಾಂತಿಕ ಅಪಘಾತ ಪ್ರಕರಣಗಳಾಗಿವೆ. ಇದರಲ್ಲಿ 177 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ 643 ಮಾರಣಾಂತಿಕ ಅಪಘಾತ ಪ್ರಕರಣಗಳು ನಡೆದಿದ್ದು, ಇದರಲ್ಲಿ, 1473 ಜನ ಗಾಯಾಳುಗಳಾಗಿದ್ದಾರೆ. ರಸ್ತೆಯಲ್ಲಿ ನಡೆಯುವ ಎಲ್ಲ ಅಪಘಾತಗಳಿಗೆ ಚಾಲಕರ ವೇಗ ಹಾಗೂ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ಆಗುತ್ತಿವೆ. ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ, ಪೇಪರ್ ಟೌನ್ ಪೊಲೀಸ್ ಠಾಣೆ, ಸಾಗರದ ಗ್ರಾಮಾಂತರ ಪೊಲೀಸ್ ಠಾಣೆ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಕುಂಸಿ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಇದಕ್ಕಾಗಿ ಹೆಚ್ಚಿನ ಅಪಘಾತವಾದ ಸ್ಥಳದಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕುತ್ತಿದೆ.
ಜಿಲ್ಲೆಯಲ್ಲಿ ನಡೆಯುವ ಎಲ್ಲ ಅಪಘಾತ ಪ್ರಕರಣಗಳಿಗೆ ಇರುವ ವೈಜ್ಞಾನಿಕ ಕಾರಣ ತಿಳಿಯಲು ಪೊಲೀಸ್ ಇಲಾಖೆ ಲೋಕೋಪಯೋಗಿ ಇಲಾಖೆಯ ಜೊತೆ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುತ್ತದೆ. ಇದರಿಂದ ಅಲ್ಲಿ ಪದೇ ಪದೆ ಅಪಘಾತ ನಡೆಯಲು ಕಾರಣವೇನು ಎಂದು ತಿಳಿಯಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು.
ಸಂಚಾರಿ ನಿಯಮ ಉಲ್ಲಂಘನೆ, ಅಪಘಾತ ನಿಯಂತ್ರಣ ಹಾಗೂ ಚಾಲಕರಲ್ಲಿ ಜಾಗೃತಿ ಮೂಡಿಸಲು ದಂಡ ಪ್ರಯೋಗ:
ವಾಹನ ಚಾಲಕರಲ್ಲಿ ಸಂಚಾರಿ ನಿಯಮವನ್ನು ಜಾಗೃತಿ ಗೊಳಿಸಲು, ಅಪಘಾತ ಪ್ರಮಾಣ ಕಡಿಮೆ ಮಾಡಲು ಪೊಲೀಸ್ ಇಲಾಖೆ ದಂಡವನ್ನು ಹಾಕುತ್ತದೆ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವುದಕ್ಕೆ, ಸಂಚಾರಿ ನಿಯಮ ಉಲ್ಲಂಘನೆಗೆ, ಕಾರಿನವರು ಸೀಟ್ ಬೆಲ್ಟ್ ಹಾಕದೇ ಇರುವುದು, ನೋ ಪಾರ್ಕಿಂಗ್, ಏಕಮುಖ ಸಂಚಾರ, ಓವರ್ ಸ್ಪೀಡ್ ಹೀಗೆ ಹಲವು ಬಗೆಯ ದಂಡವನ್ನು ಪೊಲೀಸ್ ಇಲಾಖೆಯು ಸಂಚಾರಿ ಪೊಲೀಸರ ಮೂಲಕ ಹಾಕುತ್ತದೆ.
2019 ರಲ್ಲಿ ಪೊಲೀಸರು 1.78 ಲಕ್ಷ ಪ್ರಕರಣ ದಾಖಲಿಸಿ, 2.60 ಕೋಟಿ ರೂ ದಂಡ ವಸೂಲಿ ಮಾಡಿದೆ. 2020ರ ಆಗಸ್ಟ್ ಅಂತ್ಯಕ್ಕೆ 34 ಸಾವಿರ ಪ್ರಕರಣ ದಾಖಲಿಸಿ, 1.62 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಕಡಿಮೆ ಮಾಡಲು ಹೈವೇ ಪೆಟ್ರೋಲ್ ಗಸ್ತು ವಾಹನ ಸಂಚಾರ ಮಾಡುತ್ತದೆ. ಇದು ಎಲ್ಲಿ ಅಪಘಾತವಾಗಿದೆ. ಅಲ್ಲಿಂದ ಆ್ಯಂಬುಲೆನ್ಸ್ ಬರುವುದು ತಡವಾದ್ರೆ, ಗಾಯಾಳುಗಳನ್ನು ಆಸ್ಪತ್ರಗೆ ರವಾನೆ ಮಾಡುತ್ತದೆ ಹಾಗೂ ಸಂಚಾರಕ್ಕೆ ಅನುವು ಮಾಡುವುದು ಮಾಡುತ್ತಿದೆ. ಇದರಿಂದ ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಬೇಗ ಸಿಗುತ್ತದೆ. ಒಟ್ಟಾರೆ, ರಸ್ತೆಯಲ್ಲಿ ಅಪಘಾತ ವೇಗ ಹಾಗೂ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ.