ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯ ನಿರ್ದೇಶಕರನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ಶಾಸಕರುಗಳು ಒತ್ತಾಯಿಸಿದರು.
ಎಲ್ಲಾ ಮೂಲ ಸೌಕರ್ಯಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಇದ್ದರು ಸರಿಯಾಗಿ ಚಿಕಿತ್ಸೆ ನೀಡಲ್ಲ ಎಂದು ಪ್ರತಿ ದಿನವು ಐವತ್ತಕ್ಕೂ ಹೆಚ್ಚು ಆಂಬುಲೆನ್ಸ್ಗಳು ಮಣಿಪಾಲ್ ಹೋಗುತ್ತವೆ .ಇದಕೆಲ್ಲಾ ಕಾರಣ ಮೆಗ್ಗಾನ್ ಆಸ್ಪತ್ರೆಯ ನಿರ್ದೇಶಕ ಡಾ. ಲೇಪಾಕ್ಷಿ ಎಂದು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಆರೋಪಿಸಿದರು.
ಇದಕ್ಕೆ ಧ್ವನಿ ಗೂಡಿಸಿದ ಸಾಗರ ಶಾಸಕ ಹರತಾಳು ಹಾಳಪ್ಪ ಇವರ ಅಸಮರ್ಪಕತೆಯಿಂದ ಅರಳಗೊಡಿನಲ್ಲಿ ಮಂಗನ ಕಾಯಿಲೆಗೆ ಜನ ಸಾಯಬೇಕಾಯಿತು ಎಂದರು.
ಈ ಕುರಿತು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇವೇ ಆದರೆ ಇವರ ಆಡಳಿತ ಸರಿ ಇಲ್ಲ. ಇವರು ಆಸ್ಪತ್ರೆಯ ನಿರ್ದೇಶಕರಾಗಲು ಅಸಮರ್ಥರು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನ ಸರಿಯಾಗಿ ನಿರ್ವಹಿಸುವಲ್ಲಿ ಅಸಮರ್ಥರಾಗಿದ್ದಾರೆ ಹಾಗಾಗಿ ಕೂಡಲೇ ಇವರನ್ನ ವರ್ಗಾಯಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವ ಡಿ.ಸಿ ತಮ್ಮಣ್ಣ ಸಭೆಯಲ್ಲೆ ಉನ್ನತ ಶಿಕ್ಷಣ ಸಚಿವ ತುಕಾರಂ ಅವರಿಗೆ ದೂರವಾಣಿ ಕರೆ ಮಾಡಿ ಇಲ್ಲಿನ ಪರಿಸ್ಥಿತಿ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವರು ಅವರ ಸ್ಥಾನಕ್ಕೆ ಗಂಗಾಧರ ಸ್ವಾಮಿ ಎನ್ನುವರನ್ನ ನೇಮಿಸಲಾಗಿದೆ ಎಂದರು.