ಶಿವಮೊಗ್ಗ : ಒಂದೇ ದಿನ ಎರಡು ದೇವಸ್ಥಾನಗಳಲ್ಲಿ ಕಳ್ಳತನ - ಎರಡು ದೇವಾಲಯದಲ್ಲಿ ಕಳ್ಳತನ
ಗುಡುವಿ ಗ್ರಾಮದ ಹೃದಯ ಭಾಗದಲ್ಲಿದ್ದ ಶ್ರೀ ರಾಮೇಶ್ವರ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿಯ ಹಣ ಕಳ್ಳತನವಾಗಿದೆ.
![ಶಿವಮೊಗ್ಗ : ಒಂದೇ ದಿನ ಎರಡು ದೇವಸ್ಥಾನಗಳಲ್ಲಿ ಕಳ್ಳತನ Robbery](https://etvbharatimages.akamaized.net/etvbharat/prod-images/768-512-15787102-thumbnail-3x2-bng.jpeg?imwidth=3840)
ಒಂದೇ ದಿನ ಎರಡು ದೇವಸ್ಥಾನದಲ್ಲಿ ದರೋಡೆ
ಶಿವಮೊಗ್ಗ : ಸೊರಬ ತಾಲೂಕಿನ ಗುಡುವಿ ಗ್ರಾಮದ ಶ್ರೀ ರಾಮೇಶ್ವರ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಗಿನ ಜಾವ ಹುಂಡಿ ಹಣ ಕಳ್ಳತನವಾಗಿದೆ. ದೇವಸ್ಥಾನಗಳು ಗ್ರಾಮದ ಹೃದಯಭಾಗದಲ್ಲಿದ್ದು, ಇಲ್ಲಿ ಸರಣಿಯಾಗಿ ಎರಡು ದೇವಸ್ಥಾನಗಳು ಕಳ್ಳತನವಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ದೇವಸ್ಥಾನದ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಹುಂಡಿಯ ಹಣ ಕದ್ದು ಪರಾರಿಯಾಗಿದ್ದಾರೆ. ಆದರೆ, ದೇವರ ಆಭರಣಗಳು ಸುರಕ್ಷಿತವಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.