ಶಿವಮೊಗ್ಗ: ಮಣ್ಣು ಮುಕ್ಕ ಹಾವನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಸಾಗರದ ಬಸ್ ನಿಲ್ದಾಣದಲ್ಲಿ ಅರಣ್ಯ ಸಂಚಾರಿ ಪೊಲೀಸರು ಬಂಧಿಸಿದ್ದು, ಹಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಣ್ಣು ಮುಕ್ಕಾ ಹಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿದ್ದು, ಹಾವನ್ನು ಸಾಗಾಟ ಮಾಡುತ್ತಿದ್ದ ಪ್ರಮೋದ್, ಸಿದ್ದಪ್ಪ ಹಾಗೂ ಮಲ್ಲೇಶ್ರನ್ನು ಬಂಧಿಸಿದ್ದಾರೆ.
ಹಾವನ್ನು ನಾಗಮಂಗಲದ ಬೆಳ್ಳೂರಿನಿಂದ ಸಾಗರದ ಬಸ್ ನಿಲ್ದಾಣಕ್ಕೆ ತರಲಾಗಿತ್ತು ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪ್ರಬಾರ ಪಿಎಸ್ಐ ರಂಗನಾಥ್, ಸಿಬ್ಬಂದಿ ಗಣೇಶ್, ಗಿರೀಶ್, ಮಂಜುನಾಥ್, ರತ್ನಾಕರ್, ವಿಶ್ವನಾಥ್ ಹಾಗೂ ಪುಷ್ಪಾ ಭಾಗಿಯಾಗಿದ್ದರು.