ETV Bharat / city

ನನ್ನ ಮೇಲೆ ಹಲ್ಲೆ ಆಗಿಲ್ಲ, ಕಾರನ್ನು ಗುರಿಯಾಗಿಸಿ ದಾಳಿ ನಡೆದಿದೆ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ - ಹರ್ಷ ಹತ್ಯೆ

ನಿನ್ನೆ ರಾತ್ರಿ ಸೂಳೆಬೈಲು ಬಳಿ ನನ್ನ ಕಾರನ್ನ ಗುರಿಯಾಗಿಟ್ಟುಕೊಂಡು ಅನ್ಯ ಕೋಮಿನವರು ಲಾಂಗ್​ನಿಂದ ಹೊಡೆದಿದ್ದಾರೆ. ಹರ್ಷ ಹತ್ಯೆಯ ನಂತರ ಇದನ್ನು ಬೇಕು ಅಂತಲೇ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರಿಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಹರಿಕೃಷ್ಣ
ಹರಿಕೃಷ್ಣ
author img

By

Published : May 7, 2022, 1:09 PM IST

ಶಿವಮೊಗ್ಗ: ನಿನ್ನೆ ರಾತ್ರಿ ಸೂಳೆಬೈಲು ಬಳಿ ನಡೆದ ಕಲ್ಲು ತೂರಾಟದ ವೇಳೆ ನಾನು ಕಾರಿನಲ್ಲಿ ಇರಲಿಲ್ಲ, ಆದ್ರೆ ನನ್ನ ಕಾರನ್ನ ಗುರಿಯಾಗಿಟ್ಟುಕೊಂಡು ಅನ್ಯಕೋಮಿನವರು ಲಾಂಗ್​ನಿಂದ ಹೊಡೆದಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಬಿಜೆಪಿಯ ಪ್ರಕೋಷ್ಟದ ಪ್ರಮುಖ ಹರಿಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹರಿಕೃಷ್ಣ, ಕಾರನ್ನ ಗುರಿಯಾಗಿಟ್ಟುಕೊಂಡು ಲಾಂಗ್​ನಿಂದ ಹೊಡೆದಿದ್ದಾರೆ. ಹರ್ಷ ಹತ್ಯೆಯ ನಂತರ ಇದನ್ನು ಬೇಕು ಅಂತಲೇ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಲ್ಲೆ ಕುರಿತು ಮಾಹಿತಿ ನೀಡಿದ ಹರಿಕೃಷ್ಣ

ನಿನ್ನೆ ರಾತ್ರಿ ಬೆಂಗಳೂರಿನಿಂದ ಮತ್ತೂರು ಗ್ರಾಮಕ್ಕೆ ಕಾರಿನಲ್ಲಿ ಬರುವಾಗ ಸೂಳೆಬೈಲು ಬಳಿ ಕಾರಿನ ಮೇಲೆ ದಿಢೀರನೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ಮತ್ತೂರಿನ ಇಬ್ಬರು ನಿವಾಸಿಗಳಿದ್ದರು. ಕಾರಿನ ಮೇಲೆ ದಿಢೀರನೆ ನಡೆದ ಕಲ್ಲು ತೂರಾಟದಿಂದ ಈ ಭಾಗದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಹಿಂದೂಗಳ ಮೇಲೆ ಅನ್ಯ ಕೋಮಿನವರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ 200 ಕ್ಕೂ ಅಧಿಕ ಜನ ಜಮಾವಣೆಗೊಂಡಿದ್ದರು. ನಂತರ ಸ್ಥಳಕ್ಕೆ ಎಸ್​ಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ, ಹೆಚ್ಚಿನ ಪೊಲೀಸರನ್ನು ನಿಯೋಜಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು. ರಾತ್ರಿ ಇಡೀ ಪೊಲೀಸರನ್ನ ನಿಯೋಜಿಸಿದ ಕಾರಣ ಮತ್ತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹರಿಕೃಷ್ಟ ತಿಳಿಸಿದರು.

ಇದನ್ನೂ ಓದಿ: ಶಂಕಿತ ಉಗ್ರರಿಂದ ಗುಂಡಿನ ದಾಳಿ : ಪೊಲೀಸ್​ನ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.