ಶಿವಮೊಗ್ಗ: ನಗರದ ನೆಕ್ಸಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ (30) ಎಂಬಾತನ ಮೃತದೇಹ ಪತ್ತೆಯಾಗಿದ್ದು, ಕೊಲೆ ಸಾಧ್ಯತೆಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಬಾಪೂಜಿ ನಗರದ ಗಂಗಾಮತ ಹಾಸ್ಟೆಲ್ ಹತ್ತಿರ ನಿನ್ನೆ ರಾತ್ರಿ ಸಂತೋಷ್ ಮೃತದೇಹ ಸಿಕ್ಕಿದೆ. ಮೃತ ಸಂತೋಷ್ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿಯಾಗಿದ್ದಾನೆ.
ಇದನ್ನೂ ಓದಿ: ಸಾಲ ಮಾಡಿಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ
ಮೃತನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕೋಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.