ETV Bharat / city

ಕಾಣೆಯಾಗಿದ್ದ ಶಿವಮೊಗ್ಗದ 'ಪ್ರಕಾಶ್'​ ಬಸ್ ಮಾಲೀಕ ಶವವಾಗಿ ಪತ್ತೆ - ಬಸ್​ ಮಾಲೀಕನ ಶವ ಪಟಗುಟ್ಟ ಸೇತುವೆ ಬಳಿ ಪತ್ತೆ

ಪಟಗುಪ್ಪ ಸೇತುವೆ ಮೇಲೆ ಕಾರು ನಿಂತಿದ್ದನ್ನು ಕಂಡು ಅಗ್ನಿಶಾಮಕದಳ ಹಾಗೂ ಪೊಲೀಸ್​ ತಂಡ ಹುಡುಕಾಟ ನಡೆಸುತ್ತಿದ್ದರು. ಇಂದು ಬೆಳಗ್ಗೆ ಶವ ದಡಕ್ಕೆ ತೇಲಿ ಬಂದಿದೆ.

travels-owners
ಬಸ್ ಮಾಲೀಕ
author img

By

Published : Jan 24, 2022, 10:01 AM IST

Updated : Jan 24, 2022, 12:42 PM IST

ಶಿವಮೊಗ್ಗ: ಶನಿವಾರದಂದು ನಾಪತ್ತೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್​ನ ಮಾಲೀಕ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಬಳಿ ಶನಿವಾರದಂದು ಅವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿತ್ತು. ಅನುಮಾನಗೊಂಡು ಪಟಗುಪ್ಪ ಸೇತುವೆ ಬಳಿ ಹುಡುಕಾಟ ನಡೆಸಲಾಗುತ್ತಿತ್ತು. ಇಂದು ಬೆಳ್ಳಂಬೆಳಗ್ಗೆ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್​ ಅವರ ಶವ ದಡದ ಬಳಿ ಪತ್ತೆಯಾಗಿದೆ.

ಬಸ್ ಟ್ರಾವೆಲ್ಸ್​ ನಡೆಸುತ್ತಿದ್ದ ಪ್ರಕಾಶ್ ಅವರು ಸಾಲದ ಸುಳಿಗೆ ಸಿಲುಕಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನ ಮೂಡಿದೆ. ಕಳೆದ 20 ವರ್ಷಗಳಿಂದ ಬಸ್ ಟ್ರಾವೆಲ್ಲರ್​ ಆಗಿದ್ದ ಪ್ರಕಾಶ್ ಅವರು ಕೊರೊನಾ ಲಾಕ್​ಡೌನ್​ ವೇಳೆ ನಷ್ಟಕ್ಕೀಡಾಗಿ ಸಾಲದ ಸುಳಿಗೆ ಸಿಲುಕಿದ್ದರು.

ನಗರದ ಪಟಗುಪ್ಪ ಸೇತುವೆ ಮೇಲೆ ಕಾರು ನಿಂತಿದ್ದನ್ನು ಕಂಡು ಅಗ್ನಿಶಾಮಕದಳ ಹಾಗೂ ಪೊಲೀಸ್​ ತಂಡ ಹುಡುಕಾಟ ನಡೆಸುತ್ತಿದ್ದರು. ಇಂದು ಬೆಳಗ್ಗೆ ಶವ ದಡಕ್ಕೆ ತೇಲಿ ಬಂದಿದೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಲ್ಲೇ..ಪಾ, ಎಪ್ಪಾ.. ನಾ..ವಲ್ಲೇ: ಅಡವಿಬಾವಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ವೃದ್ಧರ ರಂಪಾಟ

Last Updated : Jan 24, 2022, 12:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.