ಶಿವಮೊಗ್ಗ: ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿ ತುಂಬುವ ಹೆಗ್ಗಳಿಕೆ ಹೊಂದಿರುವ ತುಂಗಾ ಅಣೆಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ತಮ್ಮ ಪತ್ನಿ ಜಯಲಕ್ಷ್ಮಿ ಜೊತೆ ಬಾಗಿನ ಅರ್ಪಿಸಿದರು. ತುಂಬಿದ ನದಿ, ಕೆರೆ, ಅಣೆಕಟ್ಟೆಗೆ ಬಾಗಿನ ಅರ್ಪಿಸುವುದು ವಾಡಿಕೆಯಾಗಿದೆ. ಇದರಿಂದ ಸಚಿವರು ಇಂದು ತುಂಗಾ ನದಿಗೆ ಪೊಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದಕ್ಕೂ ಮೊದಲು ಸಚಿವರು ತಮ್ಮ ಪತ್ನಿ ಜೊತೆ ಬಾಗಿನಗಳಿಗೆ ಪೊಜೆ ಸಲ್ಲಿಸಿದರು.
ಓದಿ: ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾ ಘೋಷಿಸಿದ್ರೆ ಕಾಂಗ್ರೆಸ್ಗೆ 130 ರಿಂದ 150 ಸೀಟು ಪಕ್ಕಾ: ಅಖಂಡ ಭವಿಷ್ಯ
ನಂತರ ಮಾತನಾಡಿದ ಅವರು, ತುಂಗಾ ಅಣೆಕಟ್ಟೆ ಈಗಾಗಲೇ ಎರಡು ಭಾರಿ ತುಂಬಿದೆ. ಮುಂಗಾರು ಮಳೆ ಉತ್ತಮವಾಗಿ ಪ್ರಾರಂಭವಾಗಿದೆ. ಕೊರೊನಾ ಸಂದರ್ಭದಲ್ಲಿ ರೈತರು ಹೇಗೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವುದು ಎಂಬ ವೇಳೆಯಲ್ಲಿಯೇ ಉತ್ತಮ ಮಳೆಯಾಗಿದೆ. ಇದು ರೈತರ ಮೊಗದಲ್ಲಿ ಹರ್ಷ ತಂದಿದೆ. ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ಕ್ರಮ ಜರುಗಿಸಿದೆ.
ಮಳೆಯು ಉತ್ತಮವಾಗಿ ಬಂದು ರೈತರಿಗೆ ಹಾಗೂ ನಾಡಿನ ಜನತೆಗೆ ಹೆಚ್ಚು ಹಾನಿಯನ್ನುಂಟು ಮಾಡದೇ ಸಹಕರಿಸಲಿ, ಶಿವಮೊಗ್ಗ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಣೆಕಟ್ಟೆ ತುಂಬಿದೆ. ಜಿಲ್ಲೆಯಲ್ಲಿ ಎಲ್ಲಾ ಕಡೆ ಉತ್ತಮ ಮಳೆ ಬಂದು, ಕೃಷಿಕರಿಗೆ ಅನುಕೂಲವಾಗಲಿ ಎಂದರು.
ನಾವೇ ಮೊದಲು:
ಮಹಾಮಾರಿ ವಿರುದ್ದ ಹೋರಾಡಲು, ಪ್ರಪಂಚದಲ್ಲೇ ಕೊರೊನಾ ಲಸಿಕೆ ಹಾಕುವ ವಿಚಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ದೇಶದಲ್ಲೇ ಕರ್ನಾಟಕ ರಾಜ್ಯ ಕೂಡ ಮೊದಲ ಸ್ಥಾನದಲ್ಲಿದೆ ಎಂದರು.