ಶಿವಮೊಗ್ಗ: ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಎಸ್ಆರ್ಟಿಸಿ ಬಸ್ಸೊಂದು ಕೆರೆಗೆ ಉರುಳಿರುವ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದ ಬಳಿ ನಡೆದಿದೆ.
![Shivammoga](https://etvbharatimages.akamaized.net/etvbharat/prod-images/kn-smg-01-ksrtc-lake-av-7204213_30072021102619_3007f_1627620979_365.jpg)
ಸಾಗರದಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಗೆ ಕಾಸ್ಪಾಡಿ ಗ್ರಾಮದ ಕೆರೆ ಏರಿ ಮೇಲೆ ಏಕಾಏಕಿ ಬೈಕ್ ಅಡ್ಡಬಂದಿದೆ. ಇದನ್ನು ತಪ್ಪಿಸಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಈ ವೇಳೆ, ಬಸ್ನಲ್ಲಿದ್ದ 28 ಪ್ರಯಾಣಿಕರ ಪೈಕಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್ ಸವಾರಿಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.
![Shivammoga](https://etvbharatimages.akamaized.net/etvbharat/prod-images/kn-smg-01-ksrtc-lake-av-7204213_30072021102619_3007f_1627620979_980.jpg)
ಅಪಘಾತದಿಂದ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಸಾಗರ ಡಿವೈಎಸ್ಪಿ ವಿನಾಯಕ್ ಭೇಟಿ ನೀಡಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಒಂದೇ ಹೋಟೆಲ್ನಲ್ಲಿ ಬ್ರೇಕ್ ಫಾಸ್ಟ್ ಮಾಡಿದ ಈಶ್ವರಪ್ಪ- ಹ್ಯಾಟ್ರಿಕ್ ಹೀರೋ!