ETV Bharat / city

ತಿಹಾರ್, ಪರಪ್ಪನ ಆಗ್ರಹಾರ ಜೈಲಿಗಾದ್ರೂ ಹಾಕಲಿ ನಾನು ಹೆದರಲ್ಲ: ಡಿ.ಕೆ.ಶಿವಕುಮಾರ್ - ಪಿಎಸ್​ಐ ಪರೀಕ್ಷೆ ಬಗ್ಗೆ ಡಿ ಕೆ ಶಿವಕುಮಾರ್​ ಹೇಳಿಕೆ

ಕಾಂಗ್ರೆಸ್​ ಪ್ರತಿಭಟನೆ ಹಾಗೂ ಪಾದಯಾತ್ರೆ ಚುನಾವಣಾ ಗಿಮಿಕ್​ ಎಂದು ಜರಿದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಹಿಂದೆ ಎಲ್​.ಕೆ. ಅಡ್ವಾಣಿ, ಯಡಿಯೂರಪ್ಪ ಅವರು ಮಾಡಿದ ಯಾತ್ರೆಗಳೆಲ್ಲಾ ಗಿಮಿಕ್ ಆಗಿದ್ದವಾ ಎಂದು ಪ್ರಶ್ನಿಸಿದರು..

shivakumar
ಶಿವಕುಮಾರ್
author img

By

Published : May 10, 2022, 3:00 PM IST

ಶಿವಮೊಗ್ಗ: ನನ್ನನ್ನು ತಿಹಾರ್ ಜೈಲಿಗಾದ್ರೂ ಹಾಕಲಿ, ಪರಪ್ಪನ ಆಗ್ರಹಾರಕ್ಕಾದ್ರೂ ಹಾಕಲಿ. ನಾನು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಚಿವ ಡಾ.ಸಿ ಎನ್ ಅಶ್ವತ್ಥ್​ ನಾರಾಯಣ ಅವರಿ​ಗೆ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದ ಜನಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಯಾವ ಜೈಲಿಗಾದ್ರೂ ಹಾಕಲಿ, ನಾವು ಅವರಿಗೆ ಆಜ್ಞೆ ಮಾಡುವುದಕ್ಕೆ ಆಗಲ್ಲ ಎಂದರು.

ರಾಜ್ಯದಲ್ಲಿ ಪರೀಕ್ಷೆ, ನೇಮಕಾತಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಟಿಫಿಕೇಟ್​ಗಳು, ಪಾಸ್ ಮಾಡೋದು ಇವೆಲ್ಲಾ ದಂಧೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯ ಸರ್ಕಾರ ಹಗರಣಗಳನ್ನು ಮುಚ್ಚಿಡುವಂತಹ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಜಿ ಸಚಿವ ಈಶ್ವರಪ್ಪ ಅಪರಾಧಿಯಲ್ಲ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಹಗರಣವನ್ನು ಮುಚ್ಚಿ ಹಾಕಲು ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್​ ಪ್ರತಿಭಟನೆ ಹಾಗೂ ಪಾದಯಾತ್ರೆ ಚುನಾವಣಾ ಗಿಮಿಕ್​ ಎಂದು ಜರಿದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಎಲ್​ ಕೆ ಅಡ್ವಾಣಿ, ಯಡಿಯೂರಪ್ಪ ಅವರು ಮಾಡಿದ ಯಾತ್ರೆಗಳೆಲ್ಲಾ ಗಿಮಿಕ್ ಆಗಿದ್ದವಾ ಎಂದು ಪ್ರಶ್ನಿಸಿದರು.

ಕಾನೂನು ಪಾಲಿಸಿ : ಅವರವರ ಧರ್ಮ ಆಚರಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ, ಕಾನೂನು ಪಾಲಿಸಲಿ. ಗೃಹ ಸಚಿವ ಆರಗ ಜ್ಣಾನೇಂದ್ರ ಅವರು ಈ ಬಗ್ಗೆ ಹೊಸ ಕಾನೂನು ಮಾಡಿಸುವ ಬದಲು ಇರುವ ಕಾನೂನನ್ನು ಕಾಪಾಡಲಿ ಎಂದು ಹೇಳಿದರು. ಈ ವೇಳೆ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಭದ್ರಾವತಿ ಶಾಸಕ ಸಂಗಮೇಶ್, ಜಿಲ್ಲಾಧ್ಯಕ್ಷ ಸುಂದರೇಶ್ ಹಾಜರಿದ್ದರು.

ಓದಿ: ದೆಹಲಿಗೆ ಹೊರಟ ಸಿಎಂ: ವರಿಷ್ಠರ ಭೇಟಿಗೆ ಸಿಗುತ್ತಾ ಅವಕಾಶ?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.