ETV Bharat / city

ಮಲೆನಾಡಿನಲ್ಲಿ ಕೆಜಿಎಫ್ ಗೆ ಅದ್ಧೂರಿ ಸ್ವಾಗತ: ಮದುವೆ ಮರುದಿನವೇ ಚಿತ್ರ ವೀಕ್ಷಿಸಿದ ನವಜೋಡಿ

author img

By

Published : Apr 14, 2022, 11:43 AM IST

Updated : Apr 14, 2022, 2:28 PM IST

ಶಿವಮೊಗ್ಗದಲ್ಲಿ ಚಿತ್ರ ಪ್ರದರ್ಶನದ ನಡುವೆ ಯಶ್ ಅಭಿಮಾನಿಗಳು ಸ್ಕ್ರೀನ್ ಮುಂದೆ ಬಂದು ಹೂವುಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ತೆರೆ ಮೇಲೆ ಯಶ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ನೆಚ್ಚಿನ ನಟನ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

kgf-movie-released-in-shivamogga
ಮಲೆನಾಡಿನಲ್ಲಿ ಕೆಜಿಎಫ್ ಗೆ ಅದ್ಧೂರಿ ಸ್ವಾಗತ: ಮದುವೆ ಮರುದಿನವೇ ಚಿತ್ರ ವೀಕ್ಷಿಸಿದ ನವಜೋಡಿ

ಶಿವಮೊಗ್ಗ: ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಕೆ.ಜಿ.ಎಫ್- 2 ಚಿತ್ರಕ್ಕೆ ಶಿವಮೊಗ್ಗದಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ನಗರದ ಮಲ್ಲಿಕಾರ್ಜುನ, ವೀರಭದ್ರೇಶ್ವರ ಹಾಗೂ ಸಿಟಿ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬೆಳಗ್ಗೆಯಿಂದಲೇ ಚಿತ್ರ ಪ್ರದರ್ಶನಗೊಂಡಿದೆ. ಮಲ್ಲಿಕಾರ್ಜುನ ಚಿತ್ರ ಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಚಿತ್ರ ಪ್ರದರ್ಶನ ನಡೆದಿದ್ದು, ಯಶ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ.

ಚಿತ್ರ ಪ್ರದರ್ಶನದ ನಡುವೆ ಯಶ್ ಅಭಿಮಾನಿಗಳು ಸ್ಕ್ರೀನ್ ಮುಂದೆ ಬಂದು ಹೂವುಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ತೆರೆ ಮೇಲೆ ಯಶ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ನೆಚ್ಚಿನ ನಟನ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಲೆನಾಡಿನಲ್ಲಿ ಕೆಜಿಎಫ್ ಗೆ ಅದ್ಧೂರಿ ಸ್ವಾಗತ

ನಿನ್ನೆಯಷ್ಟೇ ಮದುವೆಯಾದ ನವ ಜೋಡಿಯಿಂದ ಚಿತ್ರ ವೀಕ್ಷಣೆ : ಬುಧವಾರವಷ್ಟೇ ಹಸೆ ಮಣೆ ಏರಿದ್ದ ನವಜೋಡಿ ಮದುವೆಯಾದ ಮರುದಿನವೇ ಯಶ್ ಅಭಿನಯದ ಕೆ‌ಜಿಎಫ್ -2 ಚಿತ್ರವನ್ನು ವೀಕ್ಷಿಸಿದ್ದಾರೆ. ವಿಮಲೇಶ್ ಯಶ್ ಅಭಿಮಾನಿಯಾಗಿದ್ದು, ವಿಮಲೇಶ್ ಅವರು ಅಶ್ವತ್ಥಿ ದಂಪತಿ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಸಂಭ್ರಮದಲ್ಲಿದ್ದ ಜೋಡಿ ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಡೊಳ್ಳು ಕುಣಿತಕ್ಕೆ ಮಸ್ತ್ ಮಸ್ತ್ ಸ್ಟೆಪ್ ಹಾಕಿದ್ದಾರೆ.

ಮಲೆನಾಡಿನಲ್ಲಿ ಕೆಜಿಎಫ್ ಗೆ ಭರ್ಜರಿ ಸ್ವಾಗತ: ಫಿಲಂ ನೋಡಿ ಫಿದಾ ಆದ ಅಭಿಮಾನಿಗಳು

ಓದಿ : ಬೆಂಗಳೂರಿನ ಈ ಥಿಯೇಟರ್​ನಲ್ಲಿ ಕೆಜಿಎಫ್ ಚಾಪ್ಟರ್ 2 ವೀಕ್ಷಣೆಗೆ ಬಂದ ಅಭಿಮಾನಿಗಳಿಗೆ ಶಾಕ್!

Last Updated : Apr 14, 2022, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.