ETV Bharat / city

ಈಶ್ವರಪ್ಪ ಎರಡರಿಂದ ಮೂರು ತಿಂಗಳಲ್ಲಿ ಪ್ರಕರಣದಿಂದ ಹೊರ ಬರುತ್ತಾರೆ : ಸಚಿವ ಕೆ.ಸಿ ನಾರಾಯಣಗೌಡ - statement of minitser kC narayan gowda

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಈಶ್ವರಪ್ಪನವರು ರಾಜೀನಾಮೆ ನೀಡಿದ್ದಾರೆ. ಆದ್ರೆ ಎರಡು, ಮೂರು ತಿಂಗಳುಗಳಲ್ಲಿ ಅವರು ಈ ಪ್ರಕರಣದಿಂದ ಹೊರಬರುತ್ತಾರೆ ಎಂದು ಸಚಿವ ಕೆ ಸಿ ನಾರಾಯಣ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

kc-narayan-gowda-statement-on-former-minister-ishwarappa
ಈಶ್ವರಪ್ಪ ನವರು ಇನ್ನೂ ಎರಡರಿಂದ ಮೂರು ತಿಂಗಳಲ್ಲಿ ಪ್ರಕರಣದಿಂದ ಹೊರ ಬರುತ್ತಾರೆ :ಸಚಿವ ಕೆ.ಸಿ ನಾರಾಯಣಗೌಡ
author img

By

Published : Apr 18, 2022, 8:15 AM IST

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರು ಇನ್ನೂ ಎರಡರಿಂದ ಮೂರು ತಿಂಗಳಲ್ಲಿ ಹೊರಬರುತ್ತಾರೆ ಎಂದು ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಬೇರೆ ವಿಷಯ ಇಲ್ಲದ ಕಾರಣ ಈ ವಿಷಯವನ್ನು ಹಿಡಿದುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರು ರಾಜಕಾರಣ ಮಾಡಲಿ ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಕಾರ್ಯಕಾರಿಣಿ ಸಭೆಯ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿಯ ಬಿಜೆಪಿ ಕಾರ್ಯಕಾರಿಣಿ ಸಭೆ ತುಂಬಾ ಉತ್ತಮವಾಗಿ ನಡೆದಿದೆ. ಕಾರ್ಯಕಾರಿಣಿಯ ಮುಖ್ಯ ಉದ್ದೇಶ ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲವು ಸಾಧಿಸಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವುದು ಎಂದು ಹೇಳಿದ್ದಾರೆ. ಇನ್ನೂ ಹುಬ್ಬಳ್ಳಿ ಗಲಭೆ ವಿಚಾರವಾಗಿ ಮಾತನಾಡಿದ ಅವರು ಕಾರ್ಯಕಾರಣಿಯಲ್ಲಿ ಇದ್ದ ಕಾರಣ ಅಷ್ಟೊಂದು ಮಾಹಿತಿ ಇಲ್ಲ. ತಿಳಿದುಕೊಂಡು ಹೇಳುತ್ತೇನೆ. ರಾಜ್ಯದಲ್ಲಿ ಅಶಾಂತಿ ಆಗದಂತೆ ನಮ್ಮ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.

ತಂದೆಗೆ ತಕ್ಕ ಮಗ ರಾಘವೇಂದ್ರ : ಸಂಸದ ಬಿ.ವೈ ರಾಘವೇಂದ್ರ ತಂದೆಗೆ ತಕ್ಕ ಮಗ. ಯಡಿಯೂರಪ್ಪ ನವರು ರಾಜ್ಯದಲ್ಲಿ ಅಭಿವೃದ್ಧಿ ಮಾಡಿದಂತೆ ಸಂಸದ ರಾಘವೇಂದ್ರ ಜಿಲ್ಲೆಯ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಓದಿ : ಸಂಪುಟ ಸರ್ಕಸ್​​ಗೆ ಬೀಳದ ತೆರೆ.. ತಿಂಗಳಾಂತ್ಯಕ್ಕೆ ಬೊಮ್ಮಾಯಿ ಕ್ಯಾಬಿನೆಟ್​ ವಿಸ್ತರಣೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.