ಶಿವಮೊಗ್ಗ: ಮೇ 23ರ ಮತ ಎಣಿಕೆ ನಂತರ ನನ್ನ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗುಡುಗಿದ್ದಾರೆ.
ಇಲ್ಲಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಸಹಕಾರ ನೀಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳಿಗೆ ಧನ್ಯವಾದ ತಿಳಿಸಿದರು. ಅಲ್ಲದೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಮಗೆ ಲೀಡ್ ಸಿಗುತ್ತದೆ. ಇದರಿಂದ ತಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ತಮ್ಮ ಸಾಧನೆಯ ಬಗ್ಗೆ ಮತ ಕೇಳದೆ, ಬೇರೆಯವರ ಬಗ್ಗೆ ಹೆಚ್ಚು ಅಪಪ್ರಚಾರ ನಡೆಸಿ ಚುನಾವಣೆ ನಡೆಸಿದ್ದಾರೆ. ಕುಮಾರ ಬಂಗಾರಪ್ಪನವರನ್ನು ಪಕ್ಷದ ವಕ್ತಾರರಂತೆ ಬಳಸಿಕೊಂಡಿದ್ದಾರೆ. ಇದರಿಂದ ಕೆಲ ಮತಗಳು ನನಗೆ ಬಂದಿದೆ ಎಂದು ತಮ್ಮ ಸಹೋದರನ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಹೋರಾಟಗಾರ ಎಂದು ಗುರುತಿಸಿಕೊಳ್ಳುವ ಅವಶ್ಯಕತೆ ನನಗೆ ಇತ್ತು. ಫಲಿತಾಂಶ ಉತ್ತಮವಾಗಿ ಬರುತ್ತದೆ ಎಂಬ ವಿಶ್ವಾಸವಿದೆ. ಅಲ್ಲದೆ ಜನರ ಪ್ರತಿಕ್ರಿಯೆ ಕೂಡಾ ಅದ್ಭುತವಾಗಿತ್ತು. ನನ್ನ ಬಗ್ಗೆ ಟೀಕೆಗಳಿಗೆ ನಾನು ಫಲಿತಾಂಶದ ನಂತರ ಉತ್ತರ ನೀಡುತ್ತೇನೆ ಎಂದರು.
ಯಡಿಯೂರಪ್ಪನವರನ್ನು ಅವರ ಪಕ್ಷದ ಮುಖಂಡರೇ ಮುಗಿಸುತ್ತಾರೆ. ಮೇ 23ಕ್ಕೆ ಸರ್ಕಾರ ಬದಲಾಗುತ್ತದೆ ಎಂದು ಯಡಿಯೂರಪ್ಪನವರು ಹೇಳಿದ್ದು ಸರಿಯಾಗಿದೆ. ಸರ್ಕಾರ ರಾಜ್ಯದಲ್ಲಿ ಅಲ್ಲ, ಬದಲಾಗಿ ಕೇಂದ್ರದಲ್ಲಿ ಬದಲಾವಣೆ ಆಗುತ್ತದೆ ಎಂದರು.