ETV Bharat / city

ಶಿವಮೊಗ್ಗ: ಹಳ್ಳದಲ್ಲಿ ಜಾರಿ ಬಿದ್ದು ಮಹಿಳೆ ಸಾವು, ಕುಟುಂಬಕ್ಕೆ ₹5 ಲಕ್ಷ ಪರಿಹಾರ - ಹಳ್ಳದಲ್ಲಿ ಜಾರಿ ಬಿದ್ದು ಮಹಿಳೆ ಸಾವು

ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳದಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ ಮಹಿಳೆಯ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಹಾರ ವಿತರಿಸಿದ್ದಾರೆ.

Araga Jnanendra meet family of the Woman who dies after fell in ditch
ಹಳ್ಳದಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ ಮಹಿಳೆಯ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
author img

By

Published : Jul 20, 2022, 9:34 AM IST

ಶಿವಮೊಗ್ಗ: ಹಳ್ಳದಲ್ಲಿ ಜಾರಿ ಬಿದ್ದು ಮೃತಪಟ್ಟ ಮಹಿಳೆಯ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಳಗೋಡು ಗ್ರಾಮದ ಭವಾನಿ ಶಂಕರನಾರಾಯಣ ಎಂಬುವರು ಮೊನ್ನೆ(ಸೋಮವಾರ) ತಮ್ಮ ತೋಟಕ್ಕೆ ಹೋದಾಗ ಆಕಸ್ಮಿಕವಾಗಿ ತೋಟದ ಪಕ್ಕದ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದರು.

ಬೆಳಗ್ಗೆ ತೋಟಕ್ಕೆ ಹೋದವರು ವಾಪಸಾಗದೇ ಇದ್ದಾಗ ಹುಡುಕಾಟ ನಡೆಸಿದಾಗ ಹಳ್ಳದಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು. ಮಹಿಳೆ ಮಳೆಯಿಂದ ಸಾವನ್ನಪ್ಪಿರುವ ಬಗ್ಗೆ ತಾಲೂಕು ಆಡಳಿತ ವರದಿ ಮಾಡಿತ್ತು. ಇದರನ್ವಯ ತೀರ್ಥಹಳ್ಳಿ‌ ಶಾಸಕರೂ ಆಗಿರುವ ಆರಗ ಜ್ಞಾನೇಂದ್ರ ಅಧಿಕಾರಿಗಳ ಜೊತೆ ಆಗಮಿಸಿ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ನೀಡಿದರು.

ಇದನ್ನೂ ಓದಿ: ತಳಕಳಲೆ ಡ್ಯಾಂ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.