ಶಿವಮೊಗ್ಗ: ನಕಲಿ ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಮಾರುತ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ಪ್ರಶಾಂತ್ ಮುನ್ನೂಳಿ ತಂಡ, ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದಿದೆ.

ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದ ಗಾಂಧಿ ಬಜಾರ್ನ ಕುಚ್ಚಲಕ್ಕಿ ಕೇರಿಯ ಅಂಬಿಕಾ ನಾವೆಲ್ಟಿಸ್ ಎಂಬ ಅಂಗಡಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ನಕಲಿ ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಮಾರಾಟ ಮಾಡುತ್ತಿರುವುದು ಬಯಲಿಗೆ ಬಂದಿದೆ.
ದಾಳಿ ವೇಳೆ ಒಂದು ಲೀಟರ್ನ 24 ನಕಲಿ ಕೊಬ್ಬರಿ ಎಣ್ಣೆ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಂಬಿಕಾ ನಾವೆಲ್ಟಿಸ್ ಅಂಗಡಿ ಮಾಲೀಕ ಮಹೇಂದರ್ ಪುರಿ ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತಡರಾತ್ರಿ ಸಿಎಂ ಮನೆ ಮುಂದೆ ವೀಲ್ಹಿಂಗ್: ಮೂವರು ಪೊಲೀಸ್ ವಶಕ್ಕೆ, ಸ್ಕೂಟರ್ ಜಪ್ತಿ