ETV Bharat / city

ಮನೆ ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿರುವ ಶಿವಮೊಗ್ಗ ಡಿಸಿ - undefined

ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಂದ ಜಾಗೃತಿ ಕಾರ್ಯಕ್ರಮ. ಮನೆ ಮನೆಗೆ ತೆರಳಿ ಮತದಾನದ ಮಹತ್ವ ಮನವರಿಕೆ ಮಾಡುತ್ತಿರುವ ಸ್ವೀಪ್ ಸಮಿತಿ.

ಮತದಾನ ಜಾಗೃತಿ ಕಾರ್ಯಕ್ರಮ
author img

By

Published : Apr 2, 2019, 1:19 AM IST

ಶಿವಮೊಗ್ಗ: ಮತದಾನದ ಬಗ್ಗೆ ಅರಿವು ಹಾಗೂ ಜಿಲ್ಲೆಯಲ್ಲಿ ಮತದಾನ ಹೆಚ್ಚು ಮಾಡಲು ಜಿಲ್ಲಾಡಳಿತ ವಿಶೇಷ ಪ್ರಯತಕ್ಕೆ ಕೈ ಹಾಕಿದ್ದು,‌ ಸ್ವೀಪ್​ ಸಮಿತಿ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಚುನಾವಣಾ ಆಯೋಗ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನೋಟಾ ಜಾರಿಗೆ ತಂದಿದ್ದರೂ ಸಹ ಮತ ಪ್ರಮಾಣ ನಿರೀಕ್ಷಿಸಿದಷ್ಟು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್​ ಅವರು ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅನೇಕ ಕಾರ್ಯಕ್ರಮ ನಡೆಸುತ್ತಿದ್ದು, ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡುವ ಹಾಗೂ ಮತದಾನದ ಮಹತ್ವ ತಿಳಿಸುವ ಮೂಲಕ ಜಾಗೃತಿ ಮಾಡುತ್ತಿದ್ದಾರೆ.

ಮತದಾನ ಜಾಗೃತಿ ಕಾರ್ಯಕ್ರಮ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ನಗರದ ಪ್ರದೇಶಗಳಲ್ಲಿ ಕಡಿಮೆ ಮಟ್ಟದಲ್ಲಿ ಮತದಾನ ಆಗುತ್ತಿದೆ. ಹಾಗಾಗಿ ಈ ಬಾರಿ ನಗರ ಪ್ರದೇಶವನ್ನು ಹೆಚ್ಚು ಗುರಿಯಾಗಿಟ್ಟುಕೊಂಡು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಒಂದು ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದು, ಮನೆ ಮನೆಗಳಿಗೆ ತೆರಳಿ ಮತದಾನದ ದಿನಾಂಕ, ಅದರ ಮಹತ್ವ, ತಪ್ಪದೆ ಮತದಾನ ಮಾಡಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ.

ಶಿವಮೊಗ್ಗ ನಗರದಲ್ಲಿ ಜಾಗೃತಿ ಕಾರ್ಯ ಆರಂಭವಾಗಿದೆ. ನಗರದಲ್ಲಿರುವ ಮನೆಗಳಿಗೆ ಭೇಟಿ ಮಾಡುವ ಯೋಜನೆಗಳನ್ನು ಹೊಂದಿದ್ದೇವೆ. ಈಗಾಗಲೇ ತೀರ್ಥಹಳ್ಳಿ, ಸಾಗರ ಪಟ್ಟಣಗಳಲ್ಲಿ ಜಾಗೃತಿ ಮಾಡಿದ್ದೇವೆ. ನಗರದಲ್ಲಿ ಇನ್ನು ಒಂದು ವಾರ ಈ ಅಭಿಯಾನ ಮಾಡಲಿದ್ದೇವೆ. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ, ಜನರಲ್ಲಿ ಸಾಮಾಜಿಕ ಅರಿವು ಮೂಡುತ್ತದೆ. ಈ ಮೂಲಕ ಜಿಲ್ಲೆಯನ್ನು ಮತದಾನದಲ್ಲಿ ನಂಬರ್ ಒನ್ ಮಾಡುವ ಯತ್ನವನ್ನು ಮಾಡಲಾಗುತ್ತಿದೆ ಎಂದರು.

ಮತದಾನದ ಅರಿವು ಮೂಡಿಸುತ್ತಿರುವ ವಿದ್ಯಾರ್ಥಿ:

ಸ್ವೀಪ್ ಸಮಿತಿ ಕಾರ್ಯಕ್ರಮದಡಿ ಮತದಾನ ಅರಿವು ಮೂಡಿಸಲು ಸ್ವೀಪ್ ಕಾರ್ಯಕ್ರಮ ಆಯೋಜಕರು ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮತದಾನದ ಅರಿವು ಮೂಡಿಸುತ್ತಿದ್ದಾರೆ. ಮನೆಗೆ ಭೇಟಿ ನೀಡಿದಕ್ಕೆ ಗುರುತಾಗಿ ಚುನಾವಣಾ ಆಯೋಗ ನೀಡಿರುವ ಒಂದು‌ ಸ್ಟೀಕ್ಕರ್ ಅಂಟಿಸಿ ಬರುತ್ತಿದ್ದಾರೆ. ಈ ಮೂಲಕ ಮತದಾನದ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸುತ್ತಿದ್ದಾರೆ.

Intro:ಮತದಾನದ ಬಗ್ಗೆ ಅರಿವು ಹಾಗೂ ಮತದಾನ ಹೆಚ್ಚು ಮಾಡಲು ಶಿವಮೊಗ್ಗ ಜಿಲ್ಲಾಡಳಿತ ವಿಶೇಷ ಪ್ರಯತ್ನವನ್ನು‌ ಸ್ವೀಪ್ ನ ಮೂಲಕ ನಡೆಸುತ್ತಿದೆ. ಚುನಾವಣಾ ಆಯೋಗ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನೊಟಾವನ್ನು ಜಾರಿಗೆ ತಂದಿದೆ ಆದ್ರೂ ಸಹ ಮತ ಪ್ರಮಾಣ ನಿರೀಕ್ಷಿಸಿದಷ್ಟು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು‌ ಆದ ಕೆ.ಎ.ದಯಾನಂದ್ ರವರು ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅನೇಕ ಕಾರ್ಯಕ್ರಮವನ್ನು ನಡೆಸಿದೆ. ಇದರಲ್ಲಿ ರಾಜಕೀಯ ಪಕ್ಷಗಳು ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡುವ ಹಾಗೂ ಮತದಾನದ ಮಹತ್ವವನ್ನು ತಿಳಿಸುವ ಮೂಲಕ ಮತದಾನದ ಜಾಗೃತಿ ಮಾಡಲಾಗುತ್ತಿದೆ.

Body:ಮತ ಪ್ರಮಾಣ ಹೆಚ್ಚಿಸುವ ಸಲುವಾಗ ಜಿಲ್ಲಾ ಚುನಾವಣಾಧಿಕಾರಿಗಳು ನಗರ ಪ್ರದೇಶವನ್ನು ಗುರಿಯಾಗಿಸಿ ಕೊಂಡು ಮತದಾನದ ಜಾಗೃತಿ ಮೂಡಿಸುತ್ತಿವೆ. ಈ ನಿಟ್ಟಿನಲ್ಲಿ ನಗರ ಪ್ರದೇಶ ಹಾಗೂ ಪಟ್ಟಣಗಳಲ್ಲಿ ಸ್ವೀಪ್ ನಡಿಯಲ್ಲಿ ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಮತದಾನದ ಅರಿವು ಮೂಡಿಸುತ್ತಿರುವ ವಿದ್ಯಾರ್ಥಿ:

ಸ್ವೀಪ್ ಕಾರ್ಯಕ್ರಮದಡಿ ಮತದಾನ ಅರಿವು ಮೂಡಿಸಲು ಸ್ವೀಪ್ ಕಾರ್ಯಕ್ರಮ ಮಾಡುವವರು ಕಾಲೇಜು ವಿದ್ಯಾರ್ಥಿಗಳನ್ನು ಬಳಸಿ ಕೊಳ್ಳುತ್ತಿದ್ದಾರೆ. ಈ ವಿದ್ಯಾರ್ಥಿಗಳು
ಮನೆಮನೆಗೆ ತೆರಳಿ ಮತದಾನದ ಅರಿವು ಮೂಡಿಸುತ್ತಿದ್ದಾರೆ. ಮನೆ ಮನೆಗೆ ತೆರಳುವ ವಿದ್ಯಾರ್ಥಿಗಳು ಮನೆಯವರಿಗೆ ಮೊದಲು ಮಾತನಾಡಿಸುತ್ತಾರೆ. ಮನೆಯಲ್ಲಿ ಎಷ್ಟು ಮತಗಳಿವೆ. ದಯಮಾಡಿ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕು. ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಮನೆಯರಿಗೆ ಮನವಿ ಮಾಡುತ್ತಾರೆ.ಅಲ್ಲದೆ ವಿದ್ಯಾರ್ಥಿಗಳು ಮನೆಗೆ ಭೇಟಿ ನೀಡಿದಕ್ಕೆ ಗುರುತಾಗಿ ಚುನಾವಣಾ ಆಯೋಗ ನೀಡಿರುವ ಒಂದು‌ ಸ್ಟೀಕ್ಕರ್ ಅಂಟಿಸಿ ಬರುತ್ತಿದ್ದಾರೆ. ಈ ಮೂಲಕ ಮತದಾನದ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸುತ್ತಿದ್ದಾರೆ.

Conclusion:ಇಂದು ಸಹ ಸ್ವೀಪ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಜೊತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ಎ.ದಯಾನಂದ್ ರವರು ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿ ಸ್ವತಃ ಮನೆಯ ಗೋಡೆಗೆ ಸ್ಟೀಕ್ಕರ್ ಅಂಟಿಸಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಅಧಿಕಾರಿಗಳಲ್ಲಿ ಉತ್ಸಾಹ ಮೂಡಿಸಿದರು. ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳನ್ನು ಬಳಸಿ ಕೊಳ್ಳುತ್ತಿರುವುದರಿಂದ ಅವರಿಗೆ ಮುಂದಿನ ಜೀವನಕ್ಕೂ ಸಹ ಅನುಕೂಲಕರವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ರವರು..
ಸ್ವೀಪ್ ಕಾರ್ಯಕ್ರಮಕ್ಕೆ ನಾಗರಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜಿಲ್ಲೆಯನ್ನು ಮತದಾನದಲ್ಲಿ ನಂಬರ್ ಒನ್ ಮಾಡುವ ಯತ್ನವನ್ನು ಮಾಡಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.