ಶಿವಮೊಗ್ಗ : ಚರಕ ಸಂಸ್ಥೆಗೆ ಸರ್ಕಾರದಿಂದ ಬರಬೇಕಾದ 2.50 ಕೋಟಿ ರೂ. ಬಾರದೆ, ಚರಕ ಸಂಸ್ಥೆ ನಷ್ಟಕ್ಕೀಡಾಗಿದೆ. ಸರ್ಕಾರದ ನಿರ್ಲಕ್ಷ್ಯ ನೀತಿ ಖಂಡಿಸಿ, ಚರಕ ಸಂಸ್ಥೆಯು ಶಿವಮೊಗ್ಗದ ಕೇಂದ್ರ ಕಾರಾಗೃಹದ ಮಹಿಳಾ ಬಂಧಿಗಳಿಗೆ ಉಚಿತ ಸೀರೆ ವಿತರಿಸಿದರು.
![Charaka Agency distributes free saris as a form of protest](https://etvbharatimages.akamaized.net/etvbharat/prod-images/kn-smg-02-jail-charaka-7204213_20092020130941_2009f_1600587581_972.jpg)
ಚರಕ ಸಂಸ್ಥೆಯು ಮಹಿಳೆಯರಿಂದಲೇ, ಚರಕದಿಂದ ನೂಲನ್ನು ನೇಯ್ದು, ನೈಸರ್ಗಿಕ ಬಣ್ಣದಿಂದ ಬಟ್ಟೆ ತಯಾರು ಮಾಡುತ್ತಾರೆ. ಇಂತಹ ಸಂಸ್ಥೆಯು ಲಾಕ್‌ಡೌನ್‌ನಿಂದ ಬಟ್ಟೆ ದಾಸ್ತಾನು ಉಳಿಯುವಂತಾಗಿದೆ. ಈ ರೀತಿ ಉಳಿದ ಬಟ್ಟೆಗಳನ್ನು ಬಡವರಿಗೆ ವಿತರಿಸಲಾಗುತ್ತಿದೆ. ಈಗಾಗಲೇ ಸಾಗರ, ಹೊಸನಗರ ಭಾಗದ ಬಡ ಗ್ರಾಮೀಣ ಜನರಿಗೆ ವಿತರಣೆ ಮಾಡಲಾಗಿದೆ.
![Charaka Agency distributes free saris as a form of protest](https://etvbharatimages.akamaized.net/etvbharat/prod-images/kn-smg-02-jail-charaka-7204213_20092020130941_2009f_1600587581_258.jpg)
ಇನ್ನು ಮುಂದೆ ಜೈಲು ಶಿಕ್ಷೆ ಅನುಭವಿಸಿ, ಕೆಲಸವಿಲ್ಲದ ಮಹಿಳೆಯರು ಚರಕ ಸಂಸ್ಥೆಗೆ ಬಂದರೆ ಅವರಿಗೆ ಕೆಲಸ ನೀಡಲಾಗುವುದು ಎಂದು ಚರಕದ ಮುಖ್ಯಸ್ಥ ಪ್ರಸನ್ನ ಅವರು ತಿಳಿಸಿದ್ದಾರೆ. ಚರಕದ ಈ ಕಾರ್ಯಕ್ಕೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ ರಂಗನಾಥ್ ಹಾಗೂ ಮಹಿಳಾ ಕಾರಾಗೃಹದ ಜೈಲರ್ ಅನಿತಾ ಅವರು ಅಭಿನಂದಿಸಿದರು. ಈ ವೇಳೆ ಚರಕದ ಕಾರ್ಯದರ್ಶಿ ಪ್ರತಿಭಾ, ಚರಕದ ಸಂಸ್ಥೆಯ ಮಹಾಲಕ್ಷ್ಮಿ ಹಾಜರಿದ್ದರು.