ETV Bharat / city

ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಭದ್ರಾವತಿ ಹೊಸ ಸೇತುವೆ ಮುಳುಗಡೆ - ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ

ಭದ್ರಾವತಿ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಭದ್ರಾವತಿ ಹೊಸ ಸೇತುವೆ ಮುಳುಗಡೆಯಾಗಿದೆ.

Bhadravathi new bridge submerged
ಭದ್ರಾವತಿ ಹೊಸ ಸೇತುವೆ ಮುಳುಗಡೆ
author img

By

Published : Jul 15, 2022, 9:50 AM IST

ಶಿವಮೊಗ್ಗ: ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಭದ್ರಾವತಿ ಹೊಸ ಸೇತುವೆ ಮುಳುಗಡೆಯಾಗಿದೆ. ಭದ್ರಾವತಿ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಈ ಸೇತುವೆ ಕಳೆ ಮಟ್ಟದಲ್ಲಿ ಇರುವ ಕಾರಣ ಮುಳುಗಡೆಯಾಗಿದೆ.‌

ನಿನ್ನೆ(ಗುರುವಾರ) ಸಂಜೆಯೇ ಭದ್ರಾವತಿಯ ಕವಲುಗುಂದಿ ಬಡಾವಣೆಯ 30 ಮನೆಯನ್ನು ಖಾಲಿ ಮಾಡಿಸಲಾಗಿದೆ. ಇಲ್ಲಿಂದ 120 ಜನರನ್ನು ಭದ್ರಾವತಿಯ ಒಕ್ಕಲಿಗರ ಸಭಾ ಭವನದ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಇಲ್ಲಿ ಇವರಿಗೆ ಊಟ ಹಾಗೂ ತಿಂಡಿಯ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ ಹುತ್ತಾ ಕಾಲೋನಿಯ ಸೋಷಿಯಲ್ ವೆಲ್ಫೇರ್ ಹಾಸ್ಟೆಲ್​​ನ 35 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಜತೆಗೆ ಏಕಿಷಾ ಕಾಲೋನಿಯ ನಿವಾಸಿಗಳನ್ನು ಅಲ್ಲಿಂದ ತೆರವುಗೊಳಿಸಿ, ಗುಂಡೂರಾವ್ ಶೆಡ್​​ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ರಾತ್ರಿ ಡಿಸಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿ ಕಾಳಜಿ ಕೇಂದ್ರದ ವ್ಯವಸ್ಥೆ ಗಮನಿಸಿದ್ದಾರೆ. ತಹಶೀಲ್ದಾರ್ ಪ್ರದೀಪ್ ಎಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.