ETV Bharat / city

ಲಂಚ ಸ್ವೀಕಾರ: ಒಂದೇ ದಿನ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ

ಲಂಚ ಪಡೆಯುತ್ತಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಬ್ಬರು ಅಧಿಕಾರಿಗಳು, ಎಪಿಎಂಸಿಯ ಸಹಾಯಕ ನಿರ್ದೇಶಕ ಕಚೇರಿಯ ಸೂಪರಿಂಟೆಂಡೆಂಟ್ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

accepting-bribery-three-officers-same-day-trap-the-acb
ಒಂದೇ ದಿನ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ
author img

By

Published : Dec 1, 2020, 8:25 PM IST

ಬೆಂಗಳೂರು: ನೀರಿನ ಶುದ್ದೀಕರಣ ಘಟಕಕ್ಕೆ ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ದಾಸರಹಳ್ಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳಾದ ಕೆ.ಪಿ.ಶಿವಕುಮಾರ್ ಹಾಗೂ ಉಪ ಪರಿಸರ ಅಧಿಕಾರಿ ಕೆ.ಎಂ.ಸೋಮಶೇಖರ್ ಬಲೆಗೆ ಬಿದ್ದವರು ಎನ್ನಲಾಗಿದೆ. ರಾಜಾಜಿನಗರ ನಿವಾಸಿಯೊಬ್ಬರು ಕಾಚೋಹಳ್ಳಿಯಲ್ಲಿ ಹೊಸದಾಗಿ ನೀರಿನ ಶುದ್ಧೀಕರಣ ಘಟಕಕ್ಕೆ ಅನುಮತಿ‌ ಕೋರಿ ಅರ್ಜಿ ಸಲ್ಲಿಸಿದ್ದರು‌. ಪರವಾನಗಿ ಪಡೆಯಲು 50 ಸಾವಿರ ರೂ. ಲಂಚ ನೀಡುವಂತೆ ಶಿವಕುಮಾರ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು‌‌‌.

ಈ ಸಂಬಂಧ ಎಸಿಬಿಯಲ್ಲಿ‌ ದೂರು ದಾಖಲಿಸಿದ್ದರು‌‌‌‌. ವ್ಯವಸ್ಥಿತ ಯೋಜನೆಯಂತೆ ದೂರುದಾರರು 25 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ದೊಡ್ಡ ಮಟ್ಟದಲ್ಲಿ ಲಂಚ ನೀಡುವಂತೆ ಸೋಮಶೇಖರ್ ಸಹ ಒತ್ತಡ ಹಾಕಿದ್ದ ಹಿನ್ನೆಲೆ ಇಬ್ಬರನ್ನು ಬಂಧಿಸಿರುವ ಎಸಿಬಿ, ಹೆಚ್ಚಿನ ವಿಚಾರಣೆಗೊಳಪಡಿಸಿದೆ‌.

ಶಿವಮೊಗ್ಗದಲ್ಲಿ ಎಪಿಎಂಸಿಯ ಸೂಪರಿಂಟೆಂಡೆಂಟ್ ಎಸಿಬಿ ಬಲೆಗೆ:

ಶಿವಮೊಗ್ಗ ಎಪಿಎಂಸಿಯ ಸಹಾಯಕ ನಿರ್ದೇಶಕ ಕಚೇರಿಯ ಸೂಪರಿಂಟೆಂಡೆಂಟ್ ಸಾಮ್ಯಾ ನಾಯ್ಕ ಇಂದು ಐದು ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿ, ಹಣ ಸಮೇತ ಬಂಧಿಸಿದ್ದಾರೆ.

ಎಪಿಎಂಸಿಯ ವ್ಯಾಪಾರ ಪರವಾನಗಿ ರದ್ದು ಮಾಡಲು ಉಮಾ ಮಹೇಶ್ ಎಂಬುವರ ಬಳಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರಂತೆ. ಇಂದು 5 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಉಮಾ ಮಹೇಶ್ ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆ ಎಸಿಬಿ ಡಿವೈಎಸ್ಪಿ ಲೋಕೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.