ETV Bharat / city

ಮದ್ಯ ತರುತ್ತಿದ್ದ ಯುವಕನ ಅಪಹರಣ: ಒಂದು ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು - alanahalli police crack kidnap case

ಯುವಕನ ಅಪಹರಣ ಪ್ರಕರಣವನ್ನು ಆಲನಹಳ್ಳಿ ಪೊಲೀಸರು ಒಂದೇ ಗಂಟೆಯಲ್ಲಿ ಭೇದಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ, ಯುವಕನನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

alanahalli police station
ಆಲಮನಹಳ್ಳಿ ಪೊಲೀಸ್ ಠಾಣೆ
author img

By

Published : Dec 3, 2019, 9:36 AM IST

ಮೈಸೂರು: ಯುವಕನ ಅಪಹರಣ ಪ್ರಕರಣವನ್ನು ಒಂದೇ ಗಂಟೆಯಲ್ಲಿ ಭೇದಿಸಿ, ಆರೋಪಿಗಳನ್ನು ಹಿಡಿಯುವಲ್ಲಿ ಆಲನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರದ ಯಶವಂತ್ (21) ಎಂಬ ಯುವಕನನ್ನು ಆರೋಪಿಗಳು ಅಪಹರಿಸಿದ್ದರು. ಈತ ಡಿ.1 ರಂದು 12 ಗಂಟೆ ಸಮಯದಲ್ಲಿ ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿ ಹೊರ ಬರುತ್ತಿರುವಾಗ, ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಮಂಜುನಾಥ್, ನಾಗರಾಜ್ ಹಾಗೂ ನವೀನ್ ಎಂಬುವವರು ಈತನ‌ ಜೊತೆ ಗಲಾಟೆ ಮಾಡಿದ್ದರು. ಬಳಿಕ ಯಶವಂತ್ ನನ್ನು ಆಟೋದಲ್ಲಿ ಕೂರಿಸಿಕೊಂಡು ಗೋದಾಮುವೊಂದರಲ್ಲಿ ಕೂಡಿ ಹಾಕಿ, ನಂತರ ಆತನ ಅಣ್ಣನಿಗೆ ಕರೆ ಮಾಡಿಸಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ತಕ್ಷಣ ಈ ವಿಚಾರವನ್ನು ಯಶವಂತ್ ಅಣ್ಣ ಆಲನಹಳ್ಳಿ ಪೊಲೀಸರಿಗೆ ತಿಳಿಸಿದ್ದರು. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಒಂದು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ಯುವಕನನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Intro:ಮೈಸೂರು: ಹಣಕ್ಕಾಗಿ ಯುವಕನನ್ನು ಅಪಹರಿಸಿದ ಆರೋಪಿಗಳನ್ನು ಒಂದು ಗಂಟೆಯಲ್ಲಿ ಬಂಧಿಸಿದ ಘಟನೆ ಆಲನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Body:

ಆಲನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರದ ಯಶವಂತ್ (೨೧) ಅಪಹರಣಕ್ಕೆ ಒಳಗಾದ ಯುವಕ. ಈತ ಡಿಸೆಂಬರ್ ೧ ರಂದು ೧೨ ಗಂಟೆ ಸಮಯದಲ್ಲಿ ಸಮೀಪದ ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸಿ ಹೊರ ಬರುತ್ತಿರುವಾಗ, ಅಲ್ಲೇ ಹೊಂಚು ಹಾಕಿದ್ದ ಮಂಜುನಾಥ್, ನಾಗರಾಜ್ ಹಾಗೂ ನವೀನ್ ಎಂಬ ೩ ಆರೋಪಿಗಳು ಈತನ‌ ಜೊತೆ ಗಲಾಟೆ ಮಾಡಿ, ಯಶವಂತ್ ನನ್ನು ಆಟೋದಲ್ಲಿ ಕೂರಿಸಿಕೊಂಡು ಗೋಡಾನ್ ವೊಂದರಲ್ಲಿ ಕೂಡಿ ಹಾಕಿ ಆತನ ಅಣ್ಣನಿಗೆ ಕರೆ ಮಾಡಿಸಿ ೫೦,೦೦೦ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ, ತಕ್ಷಣ ಈ ವಿಚಾರವನ್ನು ಯಶವಂತ್ ಅಣ್ಣ ಆಲನಹಳ್ಳಿ ಪೋಲಿಸರಿಗೆ ತಿಳಿಸಿದ್ದು ಕಾರ್ಯಪ್ರವೃತ್ತಿಯಾದ ಪೋಲಿಸರು ಒಂದು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ಅಪಹರಣಕಾರರಿಂದ ಯುವಕನನ್ನು ರಕ್ಷಣೆ ಮಾಡಿದ್ದು , ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮೂವರು ಅಪಹರಣಕಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.