ETV Bharat / city

ವಿಧವೆಯರನ್ನೇ ಟಾರ್ಗೆಟ್​​ ಮಾಡ್ತಿದ್ದ ಖದೀಮ ಮೈಸೂರಲ್ಲಿ ಅರೆಸ್ಟ್​

author img

By

Published : Dec 25, 2019, 7:44 AM IST

ಅಮಾಯಕ ವಿಧವೆಯರನ್ನೇ ಶಾದಿ ಡಾಟ್ ಕಾಂ ಮೂಲಕ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಚಿನ್ನಾಭರಣ, ನಗದು ಪಡೆದುಕೊಂಡು ಪರಾರಿಯಾಗುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

arrest
arrest

ಮೈಸೂರು: ಅಮಾಯಕ ವಿಧವೆಯರನ್ನ ಶಾದಿ ಡಾಟ್ ಕಾಂ ನಲ್ಲಿ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಚಿನ್ನಾಭರಣ, ನಗದು ದೋಚುತ್ತಿದ್ದ ಖದೀಮನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತಮಿಳುನಾಡಿನ ಕೊಯಿಬತ್ತೂರು ನಿವಾಸಿ ಯುವರಾಜ್ ಅಲಿಯಾಸ್​ ವಿನಿತ್‌ರಾಜ್ (46) ಬಂಧಿತ ಆರೋಪಿ. ಮೈಸೂರಿನ ವಿಧವೆ ಮಹಿಳೆವೋರ್ವರಿಗೆ ವಿನಿತ್‌ರಾಜ್ ಫೋನ್ ಮಾಡಿ, ಪರಿಚಯ ಮಾಡಿಕೊಂಡಿದ್ದ. ಅವರಿಗೆ ಮದುವೆ ಭರವಸೆ ನೀಡಿದ್ದ. ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಅನುಮಾನಗೊಂಡ ಮಹಿಳೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 80 ಸಾವಿರ ರೂಪಾಯಿ ಚಿನ್ನದ ಸರ, ಒಂದು ಮೊಬೈಲ್, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Intro:ಯುವಕ ಬಂಧನBody:ಮೈಸೂರು: ಅಮಾಯಕ ವಿಧವೆ ಮಹಿಳೆಯರನ್ನ ಶಾದಿ ಡಾಟ್ ಕಾಂ ನಲ್ಲಿ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಚಿನ್ನಾಭರಣ, ನಗದು  ಪಡೆದುಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನ ಬಂಧಿಸಿ ೮೦ ಸಾವಿರ ರೂ.ಮೌಲ್ಯದ ೩೦ ಗ್ರಾಂ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದಾರೆ.
ಮೈಸೂರಿನ ವಿಧವೆ ಮಹಿಳೆಯೊಬ್ಬರಿಗೆ ವಿನಿತ್‌ರಾಜ್ ಎಂಬಾತ ಫೋನ್ ಮಾಡಿ, ತನ್ನನ್ನು ಪರಿಚಯ ಮಾಡಿಕೊಂಡು ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿ, ನವೆಂಬರ್ ೧೮ರಂದು ತನ್ನದೇ ಕಾರಿನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಮದುವೆಗೆ ಮೊದಲು ದೋಷಮುಕ್ತ ಆಗಬೇಕು, ಆದ್ದರಿಂದ ಇಬ್ಬರೂ ಸರಗಳನ್ನು ಬದಲಾವಣೆ ಮಾಡಿಕೊಳ್ಳೋಣ ಎಂದು ಮಹಿಳೆಯಿಂದ ಚಿನ್ನದ ಸರವನ್ನು ಪಡೆದು, ತನ್ನ ಸರವನ್ನು ಮಹಿಳೆಗೆ ನೀಡಿ, ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ನಂತರ ಸುದರ್ಶನ ಸಿಲ್ಕ್ ಮಹಡಿಯಲ್ಲಿರುವ ಅಂಬರ ಹೋಟೆಲ್‌ಗೆ ಕರೆದುಕೊಂಡು ಬಂದು, ರೆಸ್ಟ್‌ರೂಂಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮತ್ತೆ ಬಂದಿರುವುದಿಲ್ಲ.
ಆಗ ಮಹಿಳೆಯು ಅನುಮಾನಗೊಂಡು ಆತನು ಕೊಟ್ಟಿದ್ದ ಚಿನ್ನದ ಸರವನ್ನು ಪರಿಶೀಲಿಸಲಾಗಿ ಸರವು ನಕಲಿಯಾಗಿರುವುದು ತಿಳಿದು ಬಂದಿದ್ದು,  ಈ ಬಗ್ಗೆ ಮಹಿಳೆಯು ನೀಡಿದ ದೂರಿನ ಮೇರೆಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಕೃಷ್ಣರಾಜ ಪೊಲೀಸರು ಈ ಪ್ರಕರಣದ ತಮಿಳುನಾಡಿನ ಕೊಯಮತ್ತೂರು ಸಾಯಿಬಾಬಾ ಕಾಲೋನಿ ನಿವಾಸಿ ಯುವರಾಜ್ ಅಲಿಯಸ್ ವಿನೀತ್(೪೬) ಬಂಧಿಸಿ, ಶಾದಿ ಡಾಟ್ ಕಾಂ ವೆಬ್‌ಸೈಟ್‌ನಲ್ಲಿ ವಿಧವೆ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ,  ಬೆಂಗಳೂರಿನ ಒಬ್ಬ ಮಹಿಳೆಯಿಂದ ೩ ಲಕ್ಷ ನಗದು ಹಣ, ಮತ್ತೊಬ್ಬ ಮಹಿಳೆಯಿಂದ ೬೮ ಗ್ರಾಂ ಚಿನ್ನಾಭರಣ, ಮೈಸೂರಿನ ವಿದ್ಯಾರಣ್ಯಪುರಂನ ಮಹಿಳೆಯಿಂದ ೩೪ ಗ್ರಾಂ ಚಿನ್ನದ ಸರವನ್ನು ಪಡೆದುಕೊಂಡು ಮೋಸ ಮಾಡಿಸಿರುವುದಾಗಿ ತಿಳಿಸಿದರೆ ಮೇರೆಗೆ ಆರೋಪಿತನಿಂದ ಕೃಷ್ಣರಾಜ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಬಂಧಪಟ್ಟಂತೆ, ೮೦ ಸಾವಿರ ಮೌಲ್ಯದ  ೩೦ ಗ್ರಾಂ ತೂಕದ ಒಂದು ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಮತ್ತು ಹೂಂಡೈ ಐ-೧೦ ಕಾರನ್ನು ವಶಪಡಿಸಿಕೊಳ್ಳಲಾಗಿದೆ.  ಉಳಿದ ಪ್ರಕರಣಗಳಲ್ಲಿ ಆರೋಪಿಯು ಚಿನ್ನಾಭರಣಗಳನ್ನು ಕೊಯಮತ್ತೂರಿನ ಮುತ್ತೂಟ್ ಗೋಲ್ಡ್ ಪಾಯಿಂಟ್‌ನಲ್ಲಿ  ಮಾರಾಟ ಮಾಡಿರುವುದರಿಂದ ಅವುಗಳ ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
   
Conclusion:ಯುವಕ ಬಂಧನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.