ETV Bharat / city

ಮಧುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿಯ ಆರೋಗ್ಯದಲ್ಲಿ ಚೇತರಿಕೆ.. ಚಿಕಿತ್ಸೆ ಮುಂದುವರಿಕೆ - T 23 tiger health recovering which found in Madhumalai

ಹುಲಿಯಲ್ಲಿ ಇನ್ನೂ ಕಾಡಿನ ನಡವಳಿಕೆ ಇರುವುದರಿಂದ ಅದನ್ನು ಚಿಕ್ಕ ಬೋನ್​​​ನಲ್ಲಿ ಇರಿಸಲಾಗಿದೆ. ಹುಲಿಯು ಚೆನ್ನಾಗಿ ಊಟ ಮಾಡುತ್ತಿದೆ. ವಾರದ 5 ದಿನಗಳಲ್ಲಿ 10 ಕೆಜಿ ದನದ ಮಾಂಸವನ್ನು ನೀಡಲಾಗುತ್ತಿದೆ. ಹುಲಿಯು ಚೆನ್ನಾಗಿ ನಿದ್ದೆ ಮಾಡುತ್ತಿದೆ..

T-23 tiger health recovering which found in Madhumalai of tamilnadu
ಮಧುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿಯ ಆರೋಗ್ಯದಲ್ಲಿ ಚೇತರಿಕೆ
author img

By

Published : Dec 31, 2021, 4:43 PM IST

ಮೈಸೂರು : ಅಕ್ಟೋಬರ್ 21ರಂದು ತಮಿಳುನಾಡಿನ ಮಧುಮಲೈನಲ್ಲಿ ಸೆರೆ ಹಿಡಿಯಲಾಗಿದ್ದ ಟಿ-23 ಹೆಸರಿನ ಹುಲಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅದಕ್ಕೆ ನೀಡುತ್ತಿರುವ ಚಿಕಿತ್ಸೆಯ ವಿಡಿಯೋ ಈಟಿವಿ ಭಾರತ್​ಗೆ ಲಭ್ಯವಾಗಿದೆ.

ಮಧುಮಲೈನಲ್ಲಿ ಸೆರೆ ಹಿಡಿಯಲಾದ ಟಿ-23 ಹುಲಿಗೆ ಮೈಸೂರಿನ ಮೃಗಾಲಯದ ಅಧೀನದಲ್ಲಿರುವ ಕೂರ್ಗಳ್ಳಿ ಸಮೀಪದ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅದರ ತೂಕ ಅಂದಾಜು 200 ಕೆಜಿಯಷ್ಟು ಆಗಿದೆ.

ಮಧುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿಯ ಆರೋಗ್ಯದಲ್ಲಿ ಚೇತರಿಕೆ

ಮಧುಮಲೈನಲ್ಲಿ ಸೆರೆ ಹಿಡಿಯಲಾದ ಗಂಡು ಹುಲಿಯು ಟೆರಿಟೆರಿ ಫೈಟ್​​ನಲ್ಲಿ ಮತ್ತು ಇತರೆ ಕಾರಣಗಳಿಂದ ಗಂಭೀರವಾಗಿ ಗಾಯಗೊಂಡಿತ್ತು. ಸುಮಾರು 7 ರಿಂದ 8 ಕಡೆ ಗಾಯಗಳಾಗಿದ್ದವು. ಅವುಗಳೆಲ್ಲ ಬಹುತೇಕ ವಾಸಿಯಾಗಿವೆ‌. ಆದರೂ ಸಹ ಪ್ರತಿದಿನ ಟಿ-23 ಹುಲಿಗೆ ಡ್ರೆಸ್ಸಿಂಗ್ ಮಾಡಲಾಗುತ್ತಿದೆ.

ಜೊತೆಗೆ ಈ ಹುಲಿಯು ಸಿಬ್ಬಂದಿಯ ಆಜ್ಞೆಯನ್ನು ನಿಧಾನವಾಗಿ ಪಾಲಿಸುತ್ತಿದೆ. ಹುಲಿಯ ಮಲವನ್ನು ಪರೀಕ್ಷಿಸಿದ್ದು ಅದಕ್ಕೆ ಯಾವುದೇ ರೀತಿಯ ಸೋಂಕು ತಗುಲಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಹುಲಿಯ ಕಣ್ಣಿನ ಭಾಗದ ಗಾಯವು ದೀರ್ಘ ಕಾಲದ ಸಮಸ್ಯೆಯಾಗಿದೆ‌.

ಇದನ್ನೂ ಓದಿ: ಪ್ರೀತಿಯಲ್ಲಿ ಬಿದ್ದ ಅಪ್ರಾಪ್ತರು ಪರಾರಿ.. ನಾಲ್ವರನ್ನು ಪತ್ತೆ ಹಚ್ಚಿದ ತುಮಕೂರಿನ ಕೋಳಾಲ ಪೊಲೀಸರು

ಹುಲಿಯಲ್ಲಿ ಇನ್ನೂ ಕಾಡಿನ ನಡವಳಿಕೆ ಇರುವುದರಿಂದ ಅದನ್ನು ಚಿಕ್ಕ ಬೋನ್​​​ನಲ್ಲಿ ಇರಿಸಲಾಗಿದೆ. ಹುಲಿಯು ಚೆನ್ನಾಗಿ ಊಟ ಮಾಡುತ್ತಿದೆ. ವಾರದ 5 ದಿನಗಳಲ್ಲಿ 10 ಕೆಜಿ ದನದ ಮಾಂಸವನ್ನು ನೀಡಲಾಗುತ್ತಿದೆ. ಹುಲಿಯು ಚೆನ್ನಾಗಿ ನಿದ್ದೆ ಮಾಡುತ್ತಿದೆ.

ಅದು ಕುಳಿತುಕೊಳ್ಳುವ ಭಂಗಿ ಕೂಡ ಸುಧಾರಿಸಿದೆ. ಹಾಗಿದ್ದರೂ ಸಹ ಹುಲಿಯ ಆರೋಗ್ಯದ ದೃಷ್ಟಿಯಿಂದ ಇನ್ನೂ 5-6 ತಿಂಗಳುಗಳ ಆರೈಕೆಯ ಅಗತ್ಯವಿದೆ ಎಂದು ಮೃಗಾಲಯದ ಮೂಲಗಳು ಖಚಿತಪಡಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.