ETV Bharat / city

ಮದುವೆಯಾಗುವುದಾಗಿ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ಪ್ರೇಯಸಿ ಆತ್ಮಹತ್ಯೆಗೆ ಯತ್ನ - ಮನನೊಂದು ವಿಷ ಸೇವಿಸಿದ ಪ್ರಿಯತಮೆ

ಕಂದೇಗಾಲದ ತ್ಯಾಗರಾಜ್ ಅದೇ ಗ್ರಾಮದ ಕಾವ್ಯಾ ಎಂಬ ಯುವತಿಯನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಆಗುವುದಾಗಿ ಹೇಳಿ ನಂಬಿಸಿ ಕೈಕೊಟ್ಟಿದ್ದಾನೆ. ಇದರಿಂದ ಮನನೊಂದ ಕಾವ್ಯಾ ಪ್ರಿಯಕರನ ಹುಟ್ಟುಹಬ್ಬದ ದಿನ, ಪ್ರಿಯಕರನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ..

Thyagaraj
ಪ್ರಿಯಕರ ತ್ಯಾಗರಾಜ್​
author img

By

Published : Apr 2, 2022, 2:39 PM IST

ಮೈಸೂರು : ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಪ್ರಿಯತಮೆ ಇದೀಗ ಮೈಸೂರಿನ ಕೆಆರ್‌ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಿಯಕರನ ಹುಟ್ಟುಹಬ್ಬದ ಸಂಭ್ರಮದ ದಿನವೇ ಈ ಘಟನೆ ನಡೆದಿದೆ.

Victim Kavya
ಕಾವ್ಯಾ

ಹುಟ್ಟುಹಬ್ಬದ ಆಚರಣೆ ವೇಳೆ ಸ್ನೇಹಿತರ ಎದುರೇ ಪ್ರಿಯತಮೆಗೆ ಪ್ರಿಯಕರ ಕಪಾಳಮೋಕ್ಷ ಮಾಡಿದ್ದರಿಂದ ಬೇಸತ್ತ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕಂದೇಗಾಲ ತ್ಯಾಗರಾಜ್ ಅದೇ ಗ್ರಾಮದ ಕಾವ್ಯಾ ಎಂಬ ಯುವತಿಯನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಮೂರು ದಿನಗಳ ಹಿಂದೆ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಆಚರಿಸಲು ಮುಂದಾದ ತ್ಯಾಗರಾಜ್ ಪ್ರಿಯತಮೆ ಕಾವ್ಯಾಳನ್ನೂ ಸಹ ಆಹ್ವಾನಿಸಿದ್ದನು. ಮದುವೆ ಪ್ರಸ್ತಾಪ ಮಾಡಿದ ಕಾವ್ಯಾಗೆ ಸ್ನೇಹಿತರ ಎದುರು ಕಪಾಳಕ್ಕೆ ಹೊಡೆದಿದ್ದಾನೆ. ಇದರಿಂದ ಮನನೊಂದ ಯುವತಿ ಕಾವ್ಯಾ ಕಂದೇಗಾಲ ಗ್ರಾಮದ ಗೆಳೆಯನ ಮನೆಗೆ ಆಗಮಿಸಿ, ತ್ಯಾಗರಾಜ್ ತಾಯಿ ಜೊತೆ ಸಂಪೂರ್ಣವಾಗಿ ವಿಚಾರವನ್ನು ತಿಳಿಸಿ ನನ್ನನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸುವ ಯತ್ನ ನಡೆಸುತ್ತಿದ್ದಾನೆಂದು ಆರೋಪಿಸಿ ವಿಷ ಸೇವಿಸಿದ್ದಾಳೆ.

ನಂತರ ಗ್ರಾಮಸ್ಥರು ಕಾವ್ಯಾಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್‌ಆಸ್ಪತ್ರೆಯ ತುರ್ತು ಘಟಕಕ್ಕೆ ರವಾನಿಸಲಾಗಿದೆ. ತ್ಯಾಗರಾಜ್ ತಂದೆ ಮದುವೆಗೆ ಅಡ್ಡಿಪಡಿಸಿದ್ದಾರೆಂದು ಹೇಳಲಾಗಿದೆ. ಯುವತಿಗೆ ಬೇರೆ ಸಂಬಂಧಗಳು ಬಂದಾಗ ತ್ಯಾಗರಾಜ್ ಮದುವೆ ಆಗುವ ಭರವಸೆ ನೀಡಿ ನಿಲ್ಲಿಸಿದ್ದಾನೆ. ಕೈಕೊಡುವ ಸೂಕ್ಷ್ಮತೆ ಅರಿತ ಕಾವ್ಯಾ ಹುಟ್ಟುಹಬ್ಬದ ಸಂದರ್ಭದಲ್ಲೇ ಮದುವೆ ಪ್ರಸ್ತಾಪ ಮಾಡಿದ್ದಾಳೆ.

ಈ ವೇಳೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹುಲ್ಲಹಳ್ಳಿ ಪೊಲೀಸರು ಕೆಆರ್‌ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನ್ಯಾಯ ಕೊಡಿಸುವಂತೆ ಯುವತಿ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ನಕ್ಸಲ್ ಸಾವಿತ್ರಿ ಶೃಂಗೇರಿ ಕೋರ್ಟ್​ಗೆ ಹಾಜರು.. ಏ.8ರವರೆಗೆ ಪೊಲೀಸ್ ಕಸ್ಟಡಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.