ಮೈಸೂರು: ಐತಿಹಾಸಿಕ ನಂಜನಗೂಡಿನ ನಂಜುಂಡೇಶ್ವರ ಪಂಚ ಮಹಾರಥೋತ್ಸವಕ್ಕೆ ಇನ್ನೊಂದೇ ದಿನ ಬಾಕಿ ಇದ್ದು, ಇಂದು ಮುಡಿ ಮಂಟಪೋತ್ಸವ ಮೆರವಣಿಗೆ ಮಾಡಲಾಯಿತು. ಶ್ರೀಕಂಠೇಶ್ವರನಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಬಗೆಯ ಅಭಿಷೇಕ ಕಾರ್ಯವನ್ನ ನೆರವೇರಿಸಿ ನಂತರ ಧಾರ್ಮಿಕ ಪೂಜಾ ವಿಧಿ ವಿಧಾನಗಳ ಮೂಲಕ ವಿಗ್ರಹಕ್ಕೆ ಕಿರೀಟ ಧಾರಣೆ ಮಾಡಲಾಯಿತು.
ಕಿರೀಟ ಧಾರಣೆ ನಂತರ ದೇವಸ್ಥಾನದ ಸುತ್ತಮುತ್ತ ಇರುವ ರಾಜಬೀದಿಗಳಲ್ಲಿ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಈ ವೇಳೆ, ನಂಜುಂಡೇಶ್ವರನಿಗೆ ಭಕ್ತಾದಿಗಳು ಜೈಕಾರ ಕೂಗಿದರು. ಗೌತಮಿ ಪಂಚ ಮಹಾ ರಥೋತ್ಸವಕ್ಕೆ ಮುನ್ನಾ ಪ್ರತಿವರ್ಷ ನಂಜುಂಡೇಶ್ವರನ ಮುಡಿ ಮಂಟಪೋತ್ಸವ ಸಮಾರಂಭ ಮಾಡಲಾಗುತ್ತದೆ.
ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧ: ಸೇನಾ ಪಡೆಗಳ ಮುಖ್ಯಸ್ಥರನ್ನು ಭೇಟಿ ಮಾಡಿದ ಮೋದಿ